ದೇಶದ ಯೋಧರನ್ನು ನಿತ್ಯ ಸ್ಮರಿಸುವಂತ್ತಾಗಬೇಕು : ಮೇಜರ್ ಓ.ಎಸ್.ಚಿಂಗಪ್ಪ ಕರೆ

26/07/2020

ಮಡಿಕೇರಿ ಜು.26 : ಗಡಿಯಲ್ಲಿದ್ದು ದೇಶದ ಜನರ ಜೀವವನ್ನು ಉಳಿಸುವ ಕೆಲಸ ಯೋಧರು ಮಾಡುತ್ತಿದ್ದು, ಅವರನ್ನು ನಿತ್ಯ ಸ್ಮರಿಸಬೇಕು ಎಂದು ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಹೇಳಿದ್ದಾರೆ.
1999ರಲ್ಲಿ ಭಾರತ ದೇಶದ ಗಡಿಗೆ ನುಸುಳಿ, ಬೆನ್ನ ಹಿಂದೆ ಚೂರಿ ಹಾಕಿದ ಪಾಕ್ ಸೇನೆಯನ್ನು ಮಟ್ಟ ಹಾಕುವಲ್ಲಿ ಭಾರತೀಯ ರಕ್ಷಣಾ ಪಡೆ ಯಶಸ್ವಿಯಾಗಿತ್ತು. ದೇಶದ ವಿರುದ್ಧ ಕುತಂತ್ರ ಮಾಡುವವರನ್ನು ಎದುರಿಸಲು ಭಾರತೀಯ ಸೈನಿಕರು ಸದಾ ಸಿದ್ಧರಾಗಿರುತ್ತಾರೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.