ಕಾರ್ಗಿಲ್ ಯುದ್ಧ ರಕ್ಷಣಾ ಪಡೆಗಳ ಸರ್ವಶ್ರೇಷ್ಠ ಹೋರಾಟ : ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಬಣ್ಣನೆ

26/07/2020

ಮಡಿಕೇರಿ ಜು.26 : 1999ರಲ್ಲಿ ನಡೆದ ಕಾರ್ಗಿಲ್ ಕದನ, ಭಾರತೀಯ ರಕ್ಷಣಾ ಪಡೆಗಳ ಸರ್ವಶ್ರೇಷ್ಠ ಹೋರಾಟದ ಐತಿಹಾಸಿಕ ಮೈಲಿಗಲ್ಲು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ಏರ್‍ಮಾರ್ಷಲ್ ನಂದಾ ಕಾರ್ಯಪ್ಪ ಬಣ್ಣಿಸಿದರು. 20 ವರ್ಷಗಳ ಹಿಂದೆ ನಡೆದ ಯುದ್ದದಲ್ಲಿ ಭಾರತೀಯ ರಕ್ಷಣಾ ಪಡೆಗಳ ಹಲವಾರು ಅಪ್ರತಿಮ ಸೇನಾಧಿಕಾರಿಗಳು ಮತ್ತು ಯೋಧರು ಅತ್ಯುನ್ನತ ರೀತಿಯಲ್ಲಿ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ ಎಂದು ನಂದಾ ಕಾರ್ಯಪ್ಪ ಅವರು ಹುತಾತ್ಮರನ್ನು ಸ್ಮರಿಸಿದರು.