3,338 ಸೋಂಕಿತರು ನಾಪತ್ತೆ

27/07/2020

ಬೆಂಗಳೂರು ಜು.27 : ಮಾರಕ ಕೊರೋನಾ ವೈರಸ್ ಮಹಾಮಾರಿ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಬ್ರೇಕ್ ಹಾಕಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಆದರೆ ಇತ್ತ ಉದ್ಯಾನ ನಗರಿಯಲ್ಲಿ ಬರೋಬ್ಬರಿ 3,338 ಕೊರೋನಾ ಸೋಂಕಿತರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 36,993 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 27,992 ಆಕ್ಟೀವ್ ಪ್ರಕರಣಗಳು ಇವೆ. ಅಲ್ಲದೇ ಸುಮಾರು 8,279 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ ಮಾರಕ ವೈರಾಣುವಿಗೆ 722 ಜನ ಅಸುನೀಗಿದ್ದಾರೆ. ಈ ಮಧ್ಯೆ ಸುಮಾರು 3,338 ಕೋವಿಡ್-19 ಸೋಂಕಿತರು ನಾಪತ್ತೆಯಾಗಿರುವುದು ಸರ್ಕಾರವನ್ನು ತೀವ್ರ ಚಿಂತೆಗೀಡು ಮಾಡಿದೆ.