ಚೆಟ್ಟಳ್ಳಿಯಲ್ಲಿ ಬಿಜೆಪಿಯಿಂದ ದಿನಸಿ ಕಿಟ್ ವಿತರಣೆ
27/07/2020

ಮಡಿಕೇರಿ ಜು. 27 : ಭಾರತೀಯ ಜನತಾ ಪಾರ್ಟಿ ವತಿಯಿಂದ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ ಅವರ ನೇತೃತ್ವದಲ್ಲಿ ಚೇರಳ ಶ್ರೀಮಂಗಲ ಹಾಗೂ ಕಂಡಕರೆ ನೆಲ್ಲಿಹಡ್ಲುವಿನಲ್ಲಿ ಕಳೆದ 15 ದಿನಗಳ ಕೊರೋನಾ ಲಾಕ್‍ಡೌನ್ ಹಿನ್ನೆಲೆ ಅಲ್ಲಿನ ನಿವಾಸಿಗಳಿಗೆ ದಿನಸಿ ಕಿಟ್ಟ್ ವಿತರಿಸಲಾಯಿತು.
ಈ ಸಂದರ್ಭ ಬಿಜೆಪಿ ತಾಲೂಕು ಮಂಡಳ ಕಾರ್ಯದರ್ಶಿ ಮೇರಿ ಅಂಬುದಾಸ್, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ಎನ್.ಎಸ್. ರವಿ, ಕಾರ್ಯದರ್ಶಿ ಮರದಾಳುಹರಿ, ವಾರ್ಡ್‍ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾದ ಪೇರಿಯನ ಉದಯ, ರವಿಕಾಫಿಬೋರ್ಡ್, ಕಡ್ಯದ ಉದಯ, ಪುತ್ತರಿರ ಶಿವುನಂಜಪ್ಪ, ಬಟ್ಟಿರ ಚಿರಂತ್ ಚಂಗಪ್ಪ, ಬಟ್ಟೀರ ಗಿರೀಶ್, ಮಣಿ ಹಾಜರಿದ್ದರು. ಕೋರೋನಾದ ಪ್ರಾರಂಭಿಕ ಹಂತದಲ್ಲಿ ದೇಶವೇ ಲಾಕ್‍ಡೌನ್ ಘೋಶಿಸಿದ ಸಂದರ್ಭದಲ್ಲೂ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳಿಗೆ ಸುಮಾರು 1120 ತರಕಾರಿ ಕಿಟ್ಟನ್ನು ವಿತರಿಸಲಾಗಿತ್ತು.

