ರುಚಿರುಚಿಯಾದ ಹಾಗಾಲಕಾಯಿ ಗೊಜ್ಜು ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಹಾಗಾಲಕಾಯಿ 4-5(ಕತ್ತರಿಸಿದ್ದು), ಹುಣಸೆ ಹಣ್ಣು 1, ನಿಂಬೆ ಹಣ್ಣು ಗಾತ್ರದ್ದು( ಬಿಸಿ ನೀರಿನಲ್ಲಿ ನೆನೆ ಹಾಕಿದ್ದು), ರುಚಿಗೆ ತಕ್ಕ ಉಪ್ಪು, ಸ್ವಲ್ಪ ಬೆಲ್ಲ, ಅರಿಶಿಣ 1 ಚಮಚ, ನೀರು 1 ಕಪ್
ಮಸಾಲೆಗೆ ಸಾಮಾಗ್ರಿಗಳು : ತುರಿದ ಕೊಬ್ಬರಿ 2 ಚಮಚ, ಒಣ ಮೆಣಸು 5, ಉದ್ದಿನ ಬೇಳೆ 1 ಚಮಚ, ನೀರು 1/4 ಕಪ್,
ಗಸೆಗಸೆ, ಒಗ್ಗರಣೆಗೆ ಎಣ್ಣೆ 2 ಚಮಚ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ಅರ್ಧ ಚಮಚ, ಸ್ವಲ್ಪ ಕರಿಬೇವಿನ ಎಲೆ
ತಯಾರಿಸುವ ವಿಧಾನ: ಕತ್ತರಿಸಿದ ಹಾಗಾಲಕಾಯಿಯನ್ನು 1 ಚಮಚ ಅರಿಶಿಣ ಹಾಕಿದ ನೀರಿನಲ್ಲಿ 10 ನಿಮಿಷ ಹಾಕಿಡಿ. ಕಡಿಮೆ ಉರಿಯಲ್ಲಿ ಒಣ ಮೆಣಸನ್ನು ರೋಸ್ಟ್ ಮಾಡಿ, ಜೊತೆಗೆ ಉದ್ದಿನ ಬೇಳೆಯನ್ನು ಹಾಕಿ ರೋಸ್ಟ್ ಮಾಡಿ ತಣ್ಣಗಾಗಲು ಇಡಿ. ಕಡಿಮೆ ಉರಿಯಲ್ಲಿ ಗಸೆಗಸೆಯನ್ನು ಹುರಿದು ಬದಿಯಲ್ಲಿಡಿ. ಈಗ ಈ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, ತೆಂಗಿನ ತುರಿ ಸೇರಿಸಿ1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ. ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದರಲ್ಲಿ ಸಾಸಿವೆ ಹಾಕಿ, ನಂತರ ಉದ್ದಿನ ಬೇಳೆ, ಕರಿಬೇವಿನ ಎಲೆ ಹಾಕಿ 1-2 ನಿಮಿಷ ಹುರಿದು ಈಗ ಹಾಗಾಲಕಾಯಿಯನ್ನು ಹಿಂಡಿ ಪಾತ್ರೆಗೆ ಹಾಕಿ, 10 ನಿಮಿಷದವರೆಗೆ ಫ್ರೈ ಮಾಡಿ. ನಂತರ ಹುಣಸೆ ಹಣ್ಣಿನ ರಸ ಸೇರಿಸಿ 10 ನಿಮಿಷ ಬೇಯಿಸಿ. ಹಾಗಾಲಕಾಯಿ ಬೆಂದ ನಂತರ ರುಬ್ಬಿದ ಮಸಾಲೆ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕ ಉಪ್ಪು ಸೇರಿಸಿ ಆಗಾಗ ಸೌಟ್ ನಿಂದ ತಿರುಗಿಸುತ್ತಾ ಮತ್ತೆ 5 ನಿಮಿಷ ಬೇಯಿಸಿದರೆ ಅನ್ನದ ಜೊತೆ ಸವಿಯಲು ರುಚಿರುಚಿಯಾದ ಹಾಗಾಲಕಾಯಿ ಗೊಜ್ಜು ರೆಡಿ.
