ಭಾರತದ ನಯಾಗಾರಾ ಜಲಪಾತ ಎಂದು ಕರೆಯಲ್ಪಡುವ ಹೊಗೆನಕಲ್ ಜಲಪಾತ

27/07/2020

ಹೊಗೆನಕಲ್ ಜಲಪಾತವು ದಕ್ಷಿಣ ಭಾರತ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಈ ಸುಂದರವಾದ ಜಲಪಾತವು ಬೆಂಗಳೂರಿನಿಂದ ಸುಮಾರು 180 ಕಿ,ಮೀ ಮತ್ತು ಧರ್ಮಪುರಿನಿಂದ ಸುಮಾರು 46 ಕಿ,ಮೀ ದೂರದಲ್ಲಿದೆ. ಈ ಜಲಪಾತವು “ಭಾರತದ ನಯಾಗಾರಾ ಜಲಪಾತ” ಎಂದು ಸಹ ಕರೆಯುತ್ತಾರೆ. ಈ ಜಲಪಾತವು ಔಷಧಿಗಳನ್ನು ಹಾಗೂ ಹಲವಾರು ಗಿಡಮೂಲಿಕೆಗಳನ್ನು ಹೊಂದಿರುವ ಜೀವ ಸಂರಕ್ಷಕವಾದ ಜಲಪಾತವೆಂದೇ ಹೇಳಬಹುದಾಗಿದೆ.

ಈ ಜಲಪಾತದಲ್ಲಿ ಸ್ನಾನ ಮಾಡುವುದೆಂದರೆಯೇ ಅದು ಸುಂಗಧಯುಕ್ತವಾದ ಔಷಧಿಯಲ್ಲಿ ಸ್ನಾನ ಮಾಡಿದಂತೆ ಹಾಗೂ ದೋಣಿ ಸವಾರಿ ಮಾಡುವುದಕ್ಕೆ ಅದ್ಭುತ ಜಲಪಾತವೆಂದೇ ಹೇಳಬಹುದಾಗಿದೆ. ಇಲ್ಲಿನ ಕಲ್ಲು ಏಷ್ಯಾದಲ್ಲಿಯೇ ಅತ್ಯಂತ ಹಳೆಯಾದಾದುದು ಎಂದು ಪರಿಗಣಿಸಲ್ಪಟ್ಟಿದೆ.

ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾವೇರಿ ನದಿ ಮೇಲಿರುವ ಜಲಪಾತವಾಗಿದೆ. ಜಲಪಾತದ ಸೌಂದರ್ಯವು ಮನಮೋಹಕವಾಗಿದ್ದು, ಶಕ್ತಿಯುತವಾದ ಔಷಧಿಯ ಚಿಕಿತ್ಸೆ, ಚಾರಣ ಮಾರ್ಗಗಳು ದೋಣಿ ಸವಾರಿಯನ್ನು ಕೂಡ ಇಲ್ಲಿ ಇವೆ. ಇಲ್ಲಿನ ಅದ್ಭುತ ಅನುಭವ ಪಡೆಯಲು ಸಾವಿರಾರು ಪ್ರವಾಸಿಗರು ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಲಪಾತವು ನೀರಿನಿಂದ ತುಂಬಿ ತುಳುವ ದೃಶ್ಯ ಎಂಥವರನ್ನು ರೋಮಾಂಚನಗೊಳಿಸದೇ ಇರದು. ಹೊಗೆನಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿ ನೆಲೆಸಿದ್ದು, ಕರ್ನಾಟಕದ ಜೀವ ನದಿ ಎಂದೆ ಗುರುತಿಸಲ್ಪಟ್ಟಿದೆ.

ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಈ ಜಲಪಾತದ ಸೌಂದರ್ಯವನ್ನು ಕಾಣುತ್ತಾ ಮೈಮರೆಯುತ್ತಾರೆ. ಶಾಂತಿಯುತವಾದ ವಾತಾವರಣ, ತಂಪಾದ ಗಾಳಿ, ಪಕ್ಷಿಗಳ ಇಂಪುನಾದ ಜಲಪಾತವು ರ್ಭೋಗರೆಯುವ ಶಬ್ದ ಇವೆಲ್ಲಾವು ಎಂಥವರನ್ನು ಮಂತ್ರ ಮುಗ್ಧಗೊಳಿಸದೇ ಇರಲಾರದು. ದಿವ್ಯವಾದ ಔಷಧಿ ಗುಣಗಳನ್ನು ಹೊಂದಿರುವ ಈ ನೀರನ್ನು ವಿಷೇಶವಾದ ಶಕ್ತಿಯು ಅಡಗಿದೆ ಎಂದು ಸ್ಥಳೀಯರ ನಂಬುತ್ತಾರೆ. ದೋಣಿಯಲ್ಲಿ ಪ್ರಯಾಣ ಮಾಡುವಾಗ ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟುಮಾಡುತ್ತದೆ ಈ ಹೊಗೆನಕಲ್ ಜಲಪಾತ.

ಹೊನೆಗಲ್ ಜಲಪಾತ ತೆರಳಲು ಸೂಕ್ತವಾದ ಸಮಯ : ಈ ಸುಂದರವಾದ ಜಲಪಾತಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಮಳೆಗಾಲದ ನಂತರದ ದಿನಗಳಲ್ಲಿ. ಆಗ ಅತ್ಯಂತ ಸುಂದರವಾದ ಪ್ರಕೃತಿಯ ಸೊಬಗು ಹಾಗೂ ಅತಿಹೆಚ್ಚು ನೀರಿನಿಂದ ತುಂಬಿತುಳ್ಳುಕ್ಕುತ್ತಿರುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಕೂಡ ಈ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ.

ತಲುಪುವ ಮಾರ್ಗ :
ಹೊಗೆನಕಲ್ ಜಲಪಾತಕ್ಕೆ ಹೋಗಲು ಎರಡು ಮಾರ್ಗಗಳಿವೆ.

ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ.
ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಬೆಟ್ಟದಿಂದ ಹೊಗೆನಕಲ್ ಗೆ ೪೭ ಕಿ.ಮೀ ದೂರ.