ಕೊಡಗಿನಲ್ಲಿ ಬಿರುಸುಗೊಂಡ ನಾಟಿ ಕಾರ್ಯ

27/07/2020

ಮಡಿಕೇರಿ ಜು.27 : ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಮಳೆಗಾಲದ ವಾತಾವರಣ ಕಂಡು ಬಾರದಿದ್ದರೂ ಕೃಷಿಕರು ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶಗಳಿದ್ದು, ಕಗ್ಗೋಡು, ಮದೆನಾಡು, ಮುಕ್ಕೋಡ್ಲು, ಕಾಲೂರು, ಮೂರ್ನಾಡು ಮತ್ತಿತರೆಡೆ ರೈತರು ನಾಟಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಕೃಷಿ ಕಾರ್ಯಕ್ಕೆ ನೀರಿನ ಲಭ್ಯತೆ ಇದೆಯಾದರೂ ಜುಲೈ ತಿಂಗಳಿನಲ್ಲಿ ಮಳೆಯ ಕೊರತೆ ಉಂಟಾಗಿದೆ.