ಪ್ರಗತಿಪರ ಕೃಷಿಕ ಗಣೇಶ್ ತಿಮ್ಮಯ್ಯರಿಗೆ ಸನ್ಮಾನ

27/07/2020

ಮಡಿಕೇರಿ ಜು.27 : ಯಾಂತ್ರೀಕೃತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅತೀ ಹೆಚ್ಚು ಇಳುವರಿ ಪಡೆದುಕೊಳ್ಳುತ್ತಿರುವ ಹಾಗೂ ಕೃಷಿ ಸಮ್ಮಾನ್ ಪ್ರಶಸ್ತಿ ಪುರಸ್ಕಾರ ಪಡೆದಿರುವ ವಿರಾಜಪೇಟೆ ತಾಲ್ಲೂಕಿನ ನಲ್ಲೂರು ಗ್ರಾಮದ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ವಿರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚ ಸಮಿತಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ತಿಮ್ಮಯ್ಯ ಅವರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಲಚೀರ ಕವಿತ, ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಉಪಾಧ್ಯಕ್ಷ ಅನಿಲ್, ಗುಡ್ಡಮಾಡ ಸುಬ್ರಹ್ಮಣಿ, ಪ್ರಧಾನ ಕಾರ್ಯದರ್ಶಿ ವಿನು, ಕಾರ್ಯದರ್ಶಿ ಅಣ್ಣಳಮಾಡ ನವೀನ್ ದೇವಯ್ಯ, ಖಜಾಂಚಿ ಪ್ರದೀಪ್, ಸದಸ್ಯರುಗಳಾದ ಎಂ.ಡಿ ಕಾರ್ತಿಕ್, ಎ.ಪಿ ಅರುಣ್, ಕೆ.ಎಂ ಕಾರ್ಯಪ್ಪ, ಎನ್. ಎಂ. ರಾಜೇಶ್, ಪಿ.ಎ ರಮೇಶ್, ಕಟ್ಟೇರ ಕವನ್, ಕೆ.ಜಿ ಆದರ್ಶ್, ಕಾಳಿಮಾಡ ಎಂ. ಸೂರಜ್, ಐಪುಮಾಡ ಸಂಜು, ಕಾಟೀಮಾಡ ಸರಿನ್ ಮುತ್ತಣ್ಣ, ಮಹೇಶ್, ವಿರಾಜಪೇಟೆ ತಾಲ್ಲೂಕು ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖ ಚೆಟ್ಟಂಗಡ ಮಹೇಶ್ ಮಂದಣ್ಣ, ಬಿಜೆಪಿ ಮುಖಂಡÀ ಕಟ್ಟೇರ ಮಿಲನ್, ವಿಜು ಹಾಜರಿದ್ದರು.