ಯುವ ಜೆಡಿಎಸ್ ನೂತನ ಪದಾಧಿಕಾರಿಗಳ ನೇಮಕ : ನಗರಾಧ್ಯಕ್ಷರಾಗಿ ಮೋನಿಷ್ ಆಯ್ಕೆ

27/07/2020

ಮಡಿಕೇರಿ ಜು.27 : ಜಿಲ್ಲೆಯಲ್ಲಿ ಜಾತ್ಯತೀತ ಜನತಾ ದಳದ ಯುವ ಘಟಕವನ್ನು ಹೆಚ್ಚು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ರಚಿಸಲಾಗಿದೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಯುವ ಘಟಕದ ಉಪಾಧ್ಯಕ್ಷರಾಗಿ ರವಿ ಕುಮಾರ್, ಸಿದ್ದಿಕ್, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ.ಜಾಶಿರ್ ಅವರನ್ನು ನೇಮಕ ಮಾಡಲಾಯಿತು. ಮಡಿಕೇರಿ ನಗರಾಧ್ಯಕ್ಷರಾಗಿ ಕೆ.ಎಂ.ಮೋನಿಷ್ ಅವರು ಆಯ್ಕೆಗೊಂಡರು.
ಸಹ ಕಾರ್ಯದರ್ಶಿಯಾಗಿ, ಶರತ್, ಅಭಿ, ಸಂಘಟನಾ ಕಾರ್ಯದರ್ಶಿಯಾಗಿ ಮುನೀರ್, ಕಿರಣ್ ಹಾಗೂ ವಕ್ತಾರರಾಗಿ ರವಿ ಕಿರಣ್, ಜಿನಾಶುದ್ದೀನ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಗೆ ಗೈರಾಗಿದ್ದ ಹಾಗೂ ಪಕ್ಷದಲ್ಲಿ ಸಕ್ರಿಯರಾಗಿರದ ಸದಸ್ಯರನ್ನು ವಜಾಗೊಳಿಸಿ ನೂತನÀ ಸದಸ್ಯರ ನೇಮಕಾತಿ ಮಾಡಲು ಸಭೆ ನಿರ್ಣಯ ಕೈಗೊಂಡಿತು. ಆಯಾ ತಾಲ್ಲೂಕಿನಲ್ಲಿ ಸಭೆ ನೆಡೆಸಿ ತಾಲ್ಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಶ್ರೀಘ್ರದಲ್ಲೇ ಜಿಲ್ಲಾ ಸಮಿತಿಗೆ 40 ಸದಸ್ಯರನ್ನು ನೇಮಕ ಮಾಡಲಾಗುವುದೆಂದು ಕೆ.ಎಂ.ಗಣೇಶ್ ತಿಳಿಸಿದರು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಪ್ರಧಾನ ಕಾರ್ಯದರ್ಶಿ ಸುನೀಲ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಹಿರಿಯ ಉಪಾಧ್ಯಕ್ಷ ಯೂಸುಪ್ ಕೊಂಡಂಗೇರಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಪ್ರಧಾನ ಸಂಚಾಲಕ ಎಂ.ಎಸ್.ಸೈಫ್ ಅಲಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜು, ವಿರಾಜಪೇಟೆ ನಗರಾಧ್ಯಕ್ಷ ಪಿ.ಎ.ಮಂಜುನಾಥ್ ಮತ್ತಿತರರು ಹಾಜರಿದ್ದರು. ಜಾಶಿರ್ ಸ್ವಾಗತಿಸಿ, ರವಿಕಿರಣ್ ನಿರೂಪಿಸಿದರು, ಅಜಿತ್ ಕೊಟ್ಟಕೇರಿಯನ ವಂದಿಸಿದರು.