ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮೇಲ್ವಿಚಾರಕಿಯಾಗಿ ಪುಷ್ಪಲತಾ ಅಧಿಕಾರ ಸ್ವೀಕಾರ

27/07/2020

ಸುಂಟಿಕೊಪ್ಪ ಜು.27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಕಾರ್ಯಕ್ಷೇತ್ರದ ಮೇಲ್ವಿಚಾರಕಿಯಾಗಿ ಪುಷ್ಪಲತಾ ಅಧಿಕಾರ ವಹಿಸಿಕೊಂಡಿದ್ದಾರೆ.
ಸುಂಟಿಕೊಪ್ಪ, ಚೆಟ್ಟಳ್ಳಿ, ಮಾದಾಪುರ, ಗರ್ವಾಲೆ, ಹರದೂರು, ಗರಗಂದೂರು, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕೆದಕಲ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸುಂಟಿಕೊಪ್ಪ ವಲಯದ ಮೇಲ್ವಿಚಾರಕಿಯಾಗಿ ಪುಷ್ಪಲತಾ ಅವರು ಅಧಿಕಾರ ವಹಿಸಿಕೊಂಡರು.