ಸುಂಟಿಕೊಪ್ಪ ಸಂತೆ : ನಿಯಮ ಪಾಲಿಸಿದ ಜನ

27/07/2020

ಸುಂಟಿಕೊಪ್ಪ ಜು.27 : ಭಾನುವಾರ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಸೋಮವಾರ ಸಂತೆ ನಡೆಯಿತು. ಮಾರುಕಟ್ಟೆಯಲ್ಲಿ ದಿನಸಿ ತರಕಾರಿ ವ್ಯಾಪಾರ ಬಿರುಸಿನಿಂದ ಕೂಡಿದ್ದು ಜನ ಜಂಗುಳಿ ಅಧಿಕವಾಗಿತ್ತು ಲಾಕ್‍ಡೌನ್ ನಿಂದ ಹೊರ ಬಂದ ಜನರು ದಿನ ನಿತ್ಯದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರು.
ಸುಂಟಿಕೊಪ್ಪ ಪಟ್ಟಣದಲ್ಲಿ ಕರೋನಾ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿಕೊಂಡು ಆಹಾರ ಸಾಮಾಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಕಂದಾಯ ಕಛೇರಿ, ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳಿಗೆ ಜನರು ದೌಡಯಿಸುತ್ತಿದ್ದರು. ಸಹಜ ಸ್ಥಿತಿಯತ್ತ ವ್ಯಾಪಾರ ವಹಿವಾಟು ಜನಜೀವನ ಸಾಗುತ್ತಿರುವುದು ಕಂಡು ಬಂದಿತ್ತು. ಆಟೋ ರಿಕ್ಷಾ ಹಾಗೂ ವಾಹನಗಳ ದಟ್ಟಣೆಯು ಎಂದಿನಂತೆ ಸಂಚರಿಸುತ್ತಿದ್ದವು.