ಅನ್ ಲಾಕ್ 3.0ದಲ್ಲಿ ಹಲವು ವಿನಾಯಿತಿ

28/07/2020

ನವದೆಹಲಿ ಜು.28 : ಅನ್ ಲಾಕ್ 2.0 ಜು.31ಕ್ಕೆ ಕೊನೆಯಾಗಲಿದ್ದು, 3.0ದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತರರಾಷ್ಟ್ರೀಯ ವಿಮಾನ ಸೇವೆ, ಮೆಟ್ರೋ ರೈಲು, ಚಿತ್ರಮಂದಿರ ಹಾಗೂ ಮೆಲ್ಟಿಪ್ಲೆಕ್ಸ್ ಗಳನ್ನು ತೆರೆಯುವಂತೆ ಕೈಗಾರಿಕಾ ಒಕ್ಕೂಟ ಎಫ್ ಐಸಿಸಿಐ ಸರ್ಕಾರಕ್ಕೆ ಸಲಹೆ ನೀಡಿದೆ.
ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನರ್ ಆರಂಭಿಸುವ ಬಗ್ಗೆಯೂ ಕೈಗಾರಿಕಾ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ಭಾರತೀಯ ಮತ್ತು ವಿದೇಶಿ ವಿಮಾನಗಳಿಗೆ ಎರಡು ರಾಷ್ಟ್ರಗಳ ನಡುವೆ ಸಂಚರಿಸಲು ಅವಕಾಶ ಕಲ್ಪಿಸಬೇಕು, ಹೋಟೆಲ್ , ರೆಸ್ಟೋರೆಂಟ್ ಗಳು, ಚಿತ್ರಮಂದಿರ, ಮೆಟ್ರೋ ರೈಲು ಸೇವೆಯನ್ನು ಆರಂಭಿಸಬೇಕೆಂದು ಚೆಂಬರ್ಸ್ ಸಲಹೆ ನೀಡಿದೆ.
ಕೋವಿಡ್-19 ಪರಿಣಾಮದಿಂದಾಗಿ ಇಡೀ ಜಗತ್ತು ಹೋರಾಡುತ್ತಿರುವಂತೆಯೇ ಧೀರ್ಘಕಾಲಿನ ಲಾಕ್ ಡೌನ್, ಆರ್ಥಿಕತೆಗೆ ಸಮರ್ಥನೀಯವಲ್ಲಾ ಎಂದು ಎಫ್ ಐಸಿಸಿಐ ಉಲ್ಲೇಖಿಸಿದೆ.