ರಾಮ ಮಂದಿರಕ್ಕೆ ಬಂಗಾರದ ಇಟ್ಟಿಗೆ

28/07/2020

ನವದೆಹಲಿ ಜು.28 : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಿಂದ ಮಾತ್ರವಲ್ಲ, ಇತರ ಧರ್ಮಿಯರು ನೀಡುವ ದೇಣಿಗೆಯನ್ನೂ ಸ್ವೀಕರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧಿಪತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿರುವ ಬೆನ್ನಲ್ಲೇ ಮೊಘಲ್ ವಂಶಸ್ಥರೊಬ್ಬರು ಅಪರೂಪದ ದೇಣಿಗೆ ನೀಡಲು ಮುಂದಾಗಿದ್ದಾರೆ.
ಮೊಘಲ್ ವಂಶಸ್ಥ ಪ್ರಿನ್ಸ್ ಯಾಕೂಬ್ ಹಬೀದುದ್ದೀನ್ ಟೂಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಬಂಗಾರದ ಇಟ್ಟಿಗೆಯನ್ನು ಕಾಣಿಕೆಯಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಒಂದು ಕೆ.ಜಿ. ತೂಕದ ಸ್ವರ್ಣ ಇಟ್ಟಿಗೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡುತ್ತೇನೆ, ಅದನ್ನು ದೇಗುಲ ನಿರ್ಮಾಣದಲ್ಲಿ ಬಳಸಬಹುದು ಎಂದು ಪ್ರಕಟಿಸಿದ್ದಾರೆ.