ಮಂದಿರಕ್ಕಾಗಿ 800 ಕಿ.ಮೀ ಪಾದಯಾತ್ರೆ

28/07/2020

ಆಯೋಧ್ಯೆ ಜು.28 : ಮಹಮದ್ ಫೈಜ್ ಖಾನ್ ಎಂಬುವವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಯನ್ನು ಕಣ್ತುಂಬಿಕೊಳ್ಳಲು 800 ಕಿ.ಮೀ ಕಾಲ್ನೆಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಇವರು ಶ್ರೀರಾಮನ ತಾಯಿ ಕೌಸಲ್ಯಾದೇವಿ ಜನ್ಮಸ್ಥಳವೆಂದು ನಂಬಲಾಗಿರುವ ಚತ್ತೀಸ್ ಗಢದ ಚಂದ್ ಖುರಿ ಗ್ರಾಮದ ವಾಸಿ. ಈ ವ್ಯಕ್ತಿಗೆ ಹಿಂದೂ ದೇವರುಗಳಲ್ಲಿ ಅತ್ಯಂತ ಭಕ್ತಿ, ಗೌರವ. ಅದೆಷ್ಟೋ ಬಾರಿ ದೇವರುಗಳ ಸ್ಮರಣೆಯಲ್ಲಿ ಪರವವಶಗೊಳ್ಳುತ್ತಾರೆ. ಹಲವು ಶತಮಾನಗಳ ಕನಸು ನನಸಾಗುತ್ತಿರುವ ಆಯೋಧ್ಯೆ ರಾಮ ಮಂದಿರದ ಅಡಿಪಾಯದ ಭೂಮಿ ಪೂಜೆ ವೀಕ್ಷಿಸಲು ಕಾಲ್ನಡಿಗೆಯಲ್ಲಿ ಹೊರಟು ಬಿಟ್ಟಿದ್ದಾರೆ. ಪ್ರಸ್ತುತ ಆವರು ಮಧ್ಯ ಪ್ರದೇಶದ ಅನುಪ್ಪೂರ್ ತಲುಪಿದ್ದಾರೆ.
ದೇವಾಲಯಗಳ ಸಂದರ್ಶಿಸುವುದು ನನಗೆ ಹೊಸದೇನು ಅಲ್ಲ, 1,500 ಕಿ.ಮೀ ನಡೆದು ಹಾದಿ ಮಧ್ಯೆ ಗುಡಿ, ಆಶ್ರಮಗಳಲ್ಲಿ ವಾಸ ಮಾಡಿದ್ದೇನೆ. ಅವುಗಳಿಗೆ ಹೋಲಿಸಿದರೆ ಈ ಪ್ರಯಾಣ ಕೇವಲ 800 ಕಿಲೋ ಮೀಟರ್ ಮಾತ್ರ ಎಂದು ಹೇಳಿದ್ದಾರೆ ಖಾನ್.