ಸಸಿ ನೆಡುವ ಅಭಿಯಾನಕ್ಕೆ ಸುನೀಲ್ ಸುಬ್ರಹ್ಮಣಿ ಚಾಲನೆ

28/07/2020

ಮಡಿಕೇರಿ ಜು.28 : ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಅಭಿಯಾನಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ ಅವರು ಮಡಿಕೇರಿಯಲ್ಲಿ ಚಾಲನೆ ನೀಡಿದರು. ಸರ್ಕಾರದ ಸಾಧನೆ ಜೊತೆಗೆ ಪರಿಸರ ಜಾಗೃತಿಗಾಗಿ ಸಸಿ ನೆಡುವ ಅಭಿಯಾನ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕಾರ್ಯದರ್ಶಿ ಮನುಮಂಜುನಾಥ್, ನಗರಸಭಾ ಮಾಜಿ ಸದಸ್ಯ ಕೆ.ಎಸ್.ರಮೇಶ್‌ ಮತ್ತಿತರ ಪ್ರಮುಖರು ಹಾಜರಿದ್ದರು.