ವಿಶ್ವ ಪ್ರಕೃತಿ ಸಂರಕ್ಷಣಾ ದಿನ : ಸಸಿ ನೆಡುವ ಅಭಿಯಾನ

28/07/2020

ಮಡಿಕೇರಿ ಜು.28 : ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ ಇಂದಿನಿಂದ ಮಳೆಗಾಲ ಅಂತ್ಯವಾಗುವವರೆಗೂ ರಾಜ್ಯದ ಎಲ್ಲಾ 58,000 ಬೂತ್‌ಗಳಲ್ಲಿ ಸರ್ಕಾರದ ಸಾಧನೆ ಜೊತೆಗೆ ಪರಿಸರ ಜಾಗೃತಿಗಾಗಿ ಸಸಿ ನೆಡುವ ಅಭಿಯಾನ ನಡೆಯಲಿದೆ ಎಂದು ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಹಸಿರ ಪರಿಸರ ಅಭಿವೃದ್ಧಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು, ಎಲ್ಲರೂ ಪ್ರಕೃತಿಯ ಸಂರಕ್ಷಣೆಯ ಪಣ ತೊಡಬೇಕು ಎಂದು ಅವರು ಕರೆ ನೀಡಿದ್ದಾರೆ.