ಮಡಿಕೇರಿ ಕೋಟೆ ದುರಸ್ತಿ ಕಾರ್ಯ ಚುರುಕು

28/07/2020

ಮಡಿಕೇರಿ ಜು.28 : ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಿದ ನಂತರ ಮಡಿಕೇರಿ ಕೋಟೆ ದುರಸ್ತಿ ಕಾರ್ಯ ಚುರುಕುಗೊಂಡಿದೆ. ಅರಸರ ಕಾಲದ ಅರಮನೆಯ ಅಭಿವೃದ್ಧಿಗಾಗಿ ಈಗಾಗಲೇ 10.77 ಕೋಟಿ ರೂಪಾಯಿಗಳ ಮಂಜೂರಾತಿ ನೀಡಲಾಗಿದ್ದು, ಮುಂದಿನ 34 ದಿನಗಳಲ್ಲಿ ಜಿಲ್ಲಾಡಳಿತಕ್ಕೆ ಹಣವನ್ನು ವರ್ಗಾಯಿಸಲಾಗುವುದೆಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಆಲೂರು ಸಿದ್ದಾಪುರ ಗ್ರಾಮದ ವಿರೂಪಾಕ್ಷಯ್ಯ ಎಂಬುವವರು ಐತಿಹಾಸಿಕ ಕಟ್ಟಡದ ನಿರ್ಲಕ್ಷ್ಯವನ್ನು ಖಂಡಿಸಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಇದೀಗ ಅಧಿಕಾರಿಗಳು ಕಾಮಗಾರಿಯನ್ನು ಚುರುಕುಗೊಳಿಸಿದ್ದಾರೆ.