ರೂ. 1854 ಕೋಟಿ ವೆಚ್ಚದಲ್ಲಿ ಕುಶಾಲನಗರಕ್ಕೆ ರೈಲು ಮಾರ್ಗ

28/07/2020

ಮಡಿಕೇರಿ ಜು.28 : ಮೈಸೂರು ಮತ್ತು ಕುಶಾಲನಗರ ನಡುವಿನ ರೈಲ್ವೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು, 1854 ಕೋಟಿ ರೂ. ವೆಚ್ಚದಲ್ಲಿ ಕುಶಾಲನಗರದ ವರೆಗೆ ರೈಲ್ವೆ ಲೈನ್ ಬರಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಿಂದ ಗುಡ್ಡೆಹೊಸೂರು ತನಕ 3120 ಕೋಟಿ ರೂ.ವೆಚ್ಚದ 4 ಲೈನ್ ಹೈವೆ ಕಾಮಗಾರಿಯ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಮಡಿಕೇರಿ-ಕುಶಾಲನಗರ ರಸ್ತೆಯು 30 ಕೋಟಿ ರೂ. ವೆಚ್ಚದಲ್ಲಿ ಡಾಮರೀಕರಣಗೊಳ್ಳಲಿದೆ ಎಂದು ತಿಳಿಸಿದರು.