ಪ್ರತಿಭಾವಂತ ವಿದ್ಯಾರ್ಥಿನಿ ಭವಾನಿಯ ನೆರವಿಗೆ ಬಂದ ಮಹೇಶ್ ಗಣಪತಿ

July 28, 2020

ಮಡಿಕೇರಿ ಜು.28 : ವಿರಾಜಪೇಟೆ ಹೆಗ್ಗಳ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಭವಾನಿ ಪಿ.ಕೆ. ಅವರ ಮನೆಗೆ ಇಂದು ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ ಅವರು ಭೇಟಿ ನೀಡಿದರು. ಭವಾನಿಯ ಶೈಕ್ಷಣಿಕ ಪ್ರಗತಿಗಾಗಿ ಧನ ಸಹಾಯ ಮಾಡಿದ ಅವರು ಮನೆ ಮತ್ತು ಶೌಚಾಲಯವನ್ನು ಗ್ರಾ.ಪಂ ಹಾಗೂ ಸಂಬಂಧಿಸಿದ ಇಲಾಖೆ ಮೂಲಕ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿ ಶಿಕ್ಷಣವನ್ನು ಮುಂದುವರೆಸಲಾಗದೆ ಅಸಹಾಯಕಳಾಗಿದ್ದ ಭವಾನಿಯ ಬಡತನದ ಬದುಕಿನ ಬಗ್ಗೆ ವರದಿ ಮಾಡಲಾಗಿತ್ತು.

error: Content is protected !!