ಮದ್ಯದ ಮಳಿಗೆಗಳನ್ನು ಷರತ್ತುಬದ್ಧವಾಗಿ ತೆರೆಯಲು ಅವಕಾಶ

28/07/2020

ಮಡಿಕೇರಿ ಜು.28 : ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಅಬಕಾರಿ ಕಾಯ್ದೆ 1965 ರ ಕಲಂ 21 ರಲ್ಲಿ ದತ್ತವಾದ ಅಧಿಕಾರದಂತೆ ಜಾರಿಗೊಳಿಸಲಾಗಿದ್ದ ಆದೇಶವನ್ನು ಹಿಂಪಡೆಯುತ್ತಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ವಿವರ ಇಂತಿದೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ. ಕಂಟೈನ್‍ಮೆಂಟ್ ಹೊರಭಾಗದ ವಲಯದಲ್ಲಿ ಸರ್ಕಾರ, ರಾಜ್ಯ ಅಬಕಾರಿ ಇಲಾಖೆಯ ಮಾರ್ಗಸೂಚಿ, ಕಾರ್ಯವಿಧಾನ, ಆದೇಶದಂತೆ ನಿಯಮಾನುಸಾರ ಕಾರ್ಯಾಚರಿಸುವುದು. ತೆರೆಯಲು ಅನುಮತಿಸಲಾಗಿರುವ ಸನ್ನದುಗಳಲ್ಲಿ ನಿಯಮಾನುಸಾರ ಕೇವಲ ಟೇಕ್ ಅವೇ ರೂಪದಲ್ಲಿ ಮಾತ್ರ ಮಾರಾಟ ಮಾಡುವುದು. ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಸನ್ನದುಗಳ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.