ನಾಗರಿಕ ಸೇವೆಗಳ ತರಬೇತಿ ಸಂಯೋಜಿತ ಪದವಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

28/07/2020

ಮಡಿಕೇರಿ ಜು.28 : ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ (ವಿಜ್ಞಾನ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ) ‘ನಾಗರಿಕ ಸೇವೆಗಳ ತರಬೇತಿ’ ಸಂಯೋಜಿತ ಪದವಿ ಶಿಕ್ಷಣಕ್ಕೆ (ಬಿ.ಎ., ಬಿ.ಕಾಂ, ಐಎಎಸ್, ಕೆಎಎಸ್ ಕೋಚಿಂಗ್) ಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ವಾರ್ಷಿಕ ಆದಾಯ ಪ್ರ-1ಕ್ಕೆ 4.5 ಲಕ್ಷ ಹಾಗೂ ಇತರರಿಗೆ ರೂ.3.5 ಲಕ್ಷ ಮಿತಿಯಲ್ಲಿರಬೇಕು. ಕೇವಲ ಬಿ.ಎ., ಬಿ.ಕಾಂ ಕೋರ್ಸುಗಳು ಮಾತ್ರ ಲಭ್ಯ. ಊಟ, ವಸತಿ ಮತ್ತು ಇತರೆ ಮೂಲಭೂತ ಸೌಲಭ್ಯದೊಂದಿಗೆ ಶಿಕ್ಷಣ. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ www.gokdom.kar.nic.in ಅನ್ನು ಹಾಗೂ ಕಚೇರಿ ದೂ.ಸಂ: 08272-225528/220214 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಿಂಗರಾಜಪ್ಪ ಅವರು ತಿಳಿಸಿದ್ದಾರೆ.