ಬುಧವಾರ ಅಭ್ಯತ್ ಮಂಗಲದಲ್ಲಿ ಕಾಡಾನೆ ಕಾರ್ಯಾಚರಣೆ

28/07/2020

*ಸಿದ್ದಾಪುರ ಜು.28 : ಅಭ್ಯತ್ ಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ಮಾಡಿ ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರಣ್ಯ ಇಲ್ಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ವನಪಾಲಕ ಕೂಡಕಂಡಿ ಸುಬ್ರಾಯ, ನೌಕರರಾದ ಚರಣ್ ಕುಮಾರ್, ಅಪ್ಪುಸ್ವಾಮಿ, ಜಗದೀಶ್, ವಾಸು ಮತ್ತಿತರರು ಕಾಡಾನೆ ದಾಳಿಯಿಂದಾಗಿರುವ ನಷ್ಟದ ಮಾಹಿತಿ ಪಡೆದರು. ಗ್ರಾಮಸ್ಥರೊಂದಿಗೆ ಚರ್ಚಿಸಿದ ಅವರು ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ವಿತರಿಸಲಾಗುವುದು ಎಂದರು.
::: ಕಾರ್ಯಾಚರಣೆ :::
ಅಭ್ಯತ್ ಮಂಗಲದಲ್ಲಿ 20 ಹಾಗೂ ನೆಲ್ಯಹುದಿಕೇರಿಯಲ್ಲಿ 2 ಕಾಡಾನೆಗಳು ಸಂಚರಿಸುತ್ತಿದ್ದು, ಇವುಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಜು.29 ರಂದು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.