ಮಕ್ಕಂದೂರು ಕೆನರಾ ಬ್ಯಾಂಕ್‌ ದರೋಡೆಗೆ ವಿಫಲ ಯತ್ನ

29/07/2020

ಮಡಿಕೇರಿ ಜು.29 : ಮಕ್ಕಂದೂರು ಕೆನರಾ ಬ್ಯಾಂಕ್‌ ದರೋಡೆಗೆ ವಿಫಲ ಯತ್ನ ನಡೆದಿದೆ. ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಬ್ಯಾಂಕ್ ಕಟ್ಟಡದ ಹಿಂಬದಿಯ ಗೋಡೆ ಕೊರೆದಿರುವ ಚೋರರು ಕೊಠಡಿಗಳಲ್ಲಿ ಜಾಲಾಡಿ ಏನೂ ಸಿಗದೆ ಪರಾರಿಯಾಗಿದ್ದಾರೆ. ಮಂಗಳವಾರ ಮಧ್ಯ ರಾತ್ರಿ ಘಟನೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ಪರಿಶೀಲಿಸಿದ್ದಾರೆ. ಚೋರರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.