ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿಗಳಿಗೆ ತರಬೇತಿ

29/07/2020

ಮಡಿಕೇರಿ ಜು.28 : ಕೋವಿಡ್ – 19 ಸೋಂಕಿತ ಪ್ರಕರಣಗಳು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿವೆ. ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇಕಡಾ 76 ಆಗಿರುತ್ತದೆ. ಈಗ ಇರುವ ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐ.ಸಿ.ಯು. ವಿಭಾಗದ ಹಾಸಿಗೆ ಸಾಮರ್ಥ್ಯವನ್ನು 56 ಹಾಸಿಗೆ ಬಲಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ ಐ.ಸಿ.ಯು. ವಿಭಾಗವನ್ನು ಅನಸ್ತೇಶಿಯಾ ವಿಭಾಗದಿಂದ ನಿಭಾಯಿಸಲಾಗುತ್ತದೆ. ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ ದಾದಿ (Staff Nurses ) ಗಳಿಗೆ ತರಬೇತಿ ನೀಡಲಾಗುತ್ತಿದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 356 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ಮಾಹೆಯಲ್ಲಿ 30 ಮಂದಿ ಕೋವಿಡ್ ಐ.ಸಿ.ಯು.ನಲ್ಲಿ ದಾಖಲಾಗಿರುತ್ತಾರೆ. 2 ಪ್ರಕರಣದಲ್ಲಿ ಮೃತರಾಗಿದ್ದು, ಹಾಲಿ 5 ಮಂದಿ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ಮಂದಿ ಬಿಡುಗಡೆ ಹೊಂದಿರುತ್ತಾರೆ.