ಪ್ರತಿಭಾವಂತ ವಿದ್ಯಾರ್ಥಿನಿ ಭವಾನಿಗೆ ಬಿಕಾಂ ಗೆ ಪ್ರವೇಶಾತಿ

29/07/2020

ಮಡಿಕೇರಿ ಜು.29 : ಬಡತನದ ಸಂಕಷ್ಟದಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಭವಾನಿಗೆ ಕೊನೆಗೂ ಬಿ.ಕಾಂ ಪ್ರವೇಶಾತಿಯಾಗಿದೆ. ವಿರಾಜಪೇಟೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಸೇಂಟ್ ಆನ್ಸ್ ಡಿಗ್ರಿ ಕಾಲೇಜಿನಲ್ಲಿ ಆಕೆಗೆ ಅವಕಾಶ ದೊರೆತ್ತಿದೆ. ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಮಧಾಲೈ ಮುತ್ತು ಅವರು ಭವಾನಿ ಯ ಮೂರು ವರ್ಷದ ಪದವಿ ಬಳಿಕ ಸ್ನಾತಕೋತ್ತರ ಶಿಕ್ಷಣ, ಪಠ್ಯ ಪುಸ್ತಕ, ಯೂನಿಫಾರ್ಮ್ ಪ್ರತಿಯೊಂದನ್ನೂ ಸಂಸ್ಥೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.