“ಸಾಮಾಜಿಕ‌ ಜಾಲತಾಣದ ಒಳಿತು-ಕೆಡುಕು” ಪ್ರಬಂಧ ಸ್ಪರ್ಧೆ

29/07/2020

ಮಡಿಕೇರಿ ಜು.29 : ಸದಾ ಸಮಾಜ ಸೇವೆ ಮಾಡುತ್ತಾ, ಜನರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಅನಿವಾಸಿ ಕನ್ನಡಿಗರ ನೆಚ್ಚಿನ‌ ಸಂಘಟನೆಯಾದ ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಘಟಕದ ವತಿಯಿಂದ “ಸಾಮಾಜಿಕ ಜಾಲತಾಣದ” ‌ಒಳಿತು+ ಕೆಡುಕು ಎಂಬ ವಿಷಯದ ಕುರಿತು ಮುಕ್ತ ಪ್ರಬಂಧ ಆಹ್ವಾನಿಸಲಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ,ಜಿಸಿಸಿ ಕೊಡಗು ಘಟಕದ ಅಧ್ಯಕ್ಷ ಹುಸೈನ್ ಫೈಝಿ ತಿಳಿಸಿದ್ದಾರೆ.

ಎಲ್ಲಾ ವಯೋಮಿತಿಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕನ್ನಡ, ಇಂಗ್ಲೀಷ್, ಮಲಯಾಳಂ ಭಾಷೆಗಳಲ್ಲಿ ಪ್ರಬಂಧ ಬರೆಯಬಹುದಾಗಿದ್ದು, ಅಕ್ಷರಗಳು ಸ್ಪಷ್ಟವಾಗಿರಬೇಕು.ಪ್ರಬಂಧವನ್ನು ಬರೆದು ಪಿಡಿಎಫ್ ಮಾಡಿ ಕಳುಹಿಸಬೇಕು.
ಹಾಗೂ ಎ ಫೋರ್ ಅಳತೆಯ ಎರಡು ಪುಟಗಳು ಮೀರದಂತಿರಬೇಕು.
ನೀವು ಕಳುಹಿಸಿರುವ ಪ್ರಬಂಧವು ಈ ಮೊದಲ ಯಾವುದೇ ಪತ್ರಿಕೆ, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
ಅತ್ಯುತ್ತಮ ಲೇಖನಕ್ಕೆ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದೆಂದು ಹುಸೈನ್ ಫೈಝಿ ‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧಗಳನ್ನು ಆಗಸ್ಟ್
3-8-2020ರ ಒಳಗಾಗಿ ಮೊಬೈಲ್ ಸಂಖ್ಯೆ +971563210719 ಕಳುಹಿಸಿಕೊಡತಕ್ಕದ್ದು.