ಕೊಡಗಿನಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.76 ಕ್ಕೆ ಏರಿಕೆ

29/07/2020

ಮಡಿಕೇರಿ ಜು.29 : ಕೋವಿಡ್–19 ಸೋಂಕಿತ ಪ್ರಕರಣಗಳು ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಸೋಂಕಿತರ ಉತ್ತಮ ಆರೈಕೆ ಮತ್ತು ಸೂಕ್ತ ಚಿಕಿತ್ಸೆಯಿಂದಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಬಿಡುಗಡೆ ಪ್ರಮಾಣ ಶೇ. 76 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಐಸಿಯು ವಿಭಾಗದ ಹಾಸಿಗೆ ಸಾಮಥ್ರ್ಯವನ್ನು 56 ಹಾಸಿಗೆಗೆ ಹೆಚ್ಚಿಸಲಾಗಿದೆ. ಕೋವಿಡ್ ಐಸಿಯು ವಿಭಾಗವನ್ನು ಅರವಳಿಕೆ (ಅನಸ್ತೇಶಿಯಾ) ವಿಭಾಗದಿಂದ ನಿಭಾಯಿಸಲಾಗುತ್ತಿದೆ. ಈ ವಿಭಾಗದಿಂದ ಕೋವಿಡ್ ಸಂಬಂಧಿತ ತುರ್ತು ಕ್ರಮಕ್ಕಾಗಿ ಹೆಚ್ಚುವರಿ ಸಿಬ್ಬಂದಿ ದಾದಿ (ಸ್ಟಾಫ್ ನರ್ಸ್) ಗಳಿಗೆ ತರಬೇತಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 356 ಕೋವಿಡ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ ಕಳೆದ ತಿಂಗಳಿನಲ್ಲಿ 30 ಮಂದಿ ಕೋವಿಡ್ ಐಸಿಯುನಲ್ಲಿ ದಾಖಲಾಗಿರುತ್ತಾರೆ. 2 ಪ್ರಕರಣದಲ್ಲಿ ಮೃತರಾಗಿದ್ದು, ಹಾಲಿ 5 ಮಂದಿ ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ಮಂದಿ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
::: ಬುಧವಾರ 12 ಪ್ರಕರಣ ಪತ್ತೆ :::
ಕೊಡಗಿನಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ 12 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಹಿಂಭಾಗದ 74 ವರ್ಷದ ಪುರುಷ, ಮಡಿಕೇರಿ ಐಟಿಐ ಹಿಂಭಾಗದ 38 ವರ್ಷದ ಪುರುಷ. ಮಡಿಕೇರಿಯ ಕಣರ್ಂಗೇರಿ ಗ್ರಾಮದ 3ನೇ ಮೈಲಿನ 32 ವರ್ಷದ ಪುರುಷ. ವೀರಾಜಪೇಟೆಯ ಸಿದ್ಧಾಪುರದ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 45, 38 ವರ್ಷದ ಮಹಿಳೆ, 15 ಮತ್ತು 9 ವರ್ಷದ ಬಾಲಕರಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಹಿಂಭಾಗದ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 45 ವರ್ಷದ ಪುರುಷ. ಸೋಮವಾರಪೇಟೆ ತಾಲೂಕಿನ ಅಭ್ಯತ್ ಮಂಗಲದ ಜ್ಯೋತಿನಗರದ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 49 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಬೆಟ್ಟಿಗೇರಿಯ 58 ವರ್ಷದ ಪುರುಷ. ಮಡಿಕೇರಿಯ ನಾಪೆÇೀಕ್ಲು ಬಳಿಯ ಎಮ್ಮೆಮಾಡುವಿನ 39 ವರ್ಷದ ಪುರುಷ. ಮಡಿಕೇರಿಯ ಕಾರುಗುಂದದ ಕಡಿಯತ್ತೂರಿನ 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 6 ಹೊಸ ಕಂಟೈನ್‍ಮೆಂಟ್ ಜೋನ್‍ಗಳನ್ನು ತೆರೆಯಲಾಗಿದೆ. ಅಶ್ವಿನಿ ಆಸ್ಪತ್ರೆ ಹಿಂಭಾಗ, ಮಡಿಕೇರಿ, ಐಟಿಐ ಹಿಂಭಾಗ ಮಡಿಕೇರಿ, ಮೂರನೇ ಮೈಲು, ಕರ್ಣಂಗೇರಿ ಗ್ರಾಮ, ಮಡಿಕೇರಿ, ಬೆಟ್ಟಗೇರಿ ರಂಗಸಮುದ್ರ, ಎಮ್ಮೆಮಾಡು, ನಾಪೋಕ್ಲು ಮತ್ತು ಕಡಿಯತ್ತೂರು ಕಾರುಗುಂದದಲ್ಲಿ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ.
6 ಕಂಟೈನ್‍ಮೆಂಟ್ ವಲಯಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಆರ್ಜಿ, ಪೆರುಂಬಾಡಿ ಅಂಚೆ, ವಿರಾಜಪೇಟೆ, ಡೀಸೆಲ್ ಕೇರ್ ಎದುರು, ಬೈಚನಹಳ್ಳಿ, ಕುಶಾಲನಗರ, ಅಚ್ಚಪ್ಪ ಲೇಔಟ್, ಗೋಣಿಕೊಪ್ಪ, ಲಕ್ಕುಂದ ಕುಟ್ಟ ವಿರಾಜಪೇಟೆ, ಸಿಬ್ಬಂದಿ ವಸತಿ ಗೃಹ, ಮುನೀಶ್ವರ ದೇವಸ್ಥಾನ, ಮಡಿಕೇರಿ ಮತ್ತು ಎಮ್ಮೆಗುಂಡಿ ರಸ್ತೆ, ಸುಂಟಿಕೊಪ್ಪ.
ಒಟ್ಟಾರೆ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 368 ಆಗಿದ್ದು, 270 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 92 ಆಗಿದ್ದು, 6 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 80 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.