ಕೊಡಗು ರಾಜಕೀಯ ವಿದ್ಯಾಮಾನದ ಕುರಿತು ಚರ್ಚೆ

29/07/2020

ಮಡಿಕೇರಿ ಜು.29 : ಕೆಪಿಸಿಸಿ ಕೊಡಗು ಜಿಲ್ಲಾ ಉಸ್ತುವಾರಿ ಎಂ.ವೆಂಕಪ್ಪ ಗೌಡ ಹಾಗೂ ಕೆಪಿಸಿಸಿ ಕೊಡಗು ಜಿಲ್ಲಾ ವೀಕ್ಷಕರಾದ ಮಂಜುಳಾ ರಾಜು ಅವರು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯ ಪ್ರಸಕ್ತ ರಾಜಕೀಯ ವಿದ್ಯಾಮಾನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ಇದೇ ಸಂದರ್ಭ ಈ ಹಿಂದೆ ಯಶಸ್ವಿಯಾಗಿ ನಡೆದ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಮತ್ತು ಮುಂದೆ ನಡೆಯಲಿರುವ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ವಿವರಿಸಿದರು.
ಸಂಯೋಜಕರಾದ ಹೇಮನಾಥ ಶೆಟ್ಟಿ, ಎಡ್ವಿನ್ ರಿಚರ್ಡ್, ಕೆ.ಪಿ.ರಾಜು, ಪ್ರದೀಪ್ ರೈ ಪಾಂಬಾರು, ಜಿ.ಬಿ.ಜಾನ್ ಹಾಜರಿದ್ದರು.