ಜಾನುವಾರುಗಳ ಅಕ್ರಮ ಸಾಗಾಟ : ಸೋಮವಾರಪೇಟೆಯಲ್ಲಿ ಓರ್ವನ ಬಂಧನ

29/07/2020

ಸೋಮವಾರಪೇಟೆ ಜು.29 : ಅಕ್ರಮವಾಗಿ ಜಾನುವಾರುಗಳ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಸೊಮವಾರಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹೆಬ್ಬಾಲೆ ಗ್ರಾಮದ ದೇವರಾಜು ಬಂಧಿತ ಆರೋಪಿ. ಹಟ್ಟಿಹೊಳೆ ಯಿಂದ ಸೋಮವಾರಪೇಟೆ ಕಡೆಗೆ ಕೆ.ಎ 12-5284 ಪಿಕ್‍ಅಪ್‍ನಲ್ಲಿ ಸಾಗಾಟ ಮಾಡುವ ಸಂದರ್ಭ ಐಗೂರು ಸಮೀಪ ಸಿಪಿಐ ನಂಜುಂಡೇಗೌಡ ಹಾಗು ಸಿಬ್ಬಂದಿಗಳು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.