ಮರಳು ಸಾಗಿಸುತ್ತಿದ್ದ ವಾಹನ ವಶ : ಮಾದಾಪುರದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

29/07/2020

ಸೋಮವಾರಪೇಟೆ ಜು.29 : ಅಕ್ರಮ ಮರಳು ಸಾಗಿಸುತ್ತಿದ್ದ ವಾಹನ ಮತ್ತು ಆರೋಪಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಮಾದಾಪುರ ಗ್ರಾಮದ ಮಧು ಆರೋಪಿ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶಿವಶಂಕರ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗೆ 16 ಸಾವಿರ ದಂಡವನ್ನು ವಿಧಿಸಿ, ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.