ಕೊಡಗು ಜಿಲ್ಲೆಯ ಮಳೆ ವಿವರ

30/07/2020

ಮಡಿಕೇರಿ ಜು. 30 : ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 9.4 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 14.31 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.87 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.02 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 7, ನಾಪೋಕ್ಲು 23.2, ಸಂಪಾಜೆ 12, ಭಾಗಮಂಡಲ 15.02, ಸೋಮವಾರಪೇಟೆ ಕಸಬಾ 1.08, ಶಾಂತಳ್ಳಿ 5.02, ವಿರಾಜಪೇಟೆ ಕಸಬಾ 13, ಅಮ್ಮತ್ತಿ 15, ಪೊನ್ನಂಪೇಟೆ 15, ಹುದಿಕೇರಿ 6, ಶ್ರೀಮಂಗಲ 13, ಬಾಳೆಲೆ 14 ಮಿ.ಮೀ.ಮಳೆಯಾಗಿದೆ.