ಸರ್ವರೋಗಕ್ಕೂ ಮನೆಮದ್ದು ವೀಳ್ಯದೆಲೆ

ಭಾರತೀಯರು ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ಇಂದಿನ ದಿನಗಳಲ್ಲಿ ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ. ಆದರೆ ತಂಬಾಕು ರಹಿತ ವಾಗಿರುವಂತಹ ವೀಳ್ಯದೆಲೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಆಯುರ್ವೇದ ಹಾಗೂ ಚೀನಾದ ಕೆಲವೊಂದು ವೈದ್ಯಕೀಯ ವಿಧಾನಗಳಲ್ಲಿ ವೀಳ್ಯದೆಲೆಯನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್, ಮಧುಮೇಹ ಮತ್ತು ಹಲ್ಲಿನ ಸೋಂಕನ್ನು ನಿವಾರಣೆ ಮಾಡುವುದು ಎಂದು ಪರಿಗಣಿಸಲಾಗಿದೆ.
ವೀಳ್ಯದೆಲೆ(ತುಳು:ಬಚ್ಚಿರೆ) ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ಆರೋಗ್ಯಕ್ಕೆ ವೀಳ್ಯದೆಲೆಯ ಉಪಯೋಗಗಳು :
ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಹಲ್ಲಿನ ಆರೋಗ್ಯ ಕಾಪಾಡುವುದು, ಗಾಯ ಗುಣಪಡಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡುವುದು.
ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ :
ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಕರುಳಿನಲ್ಲಿ ಗ್ಲೂಕೋಸ್ ಹೀರುವಿಕೆಯನ್ನು ಪ್ರತಿಬಂಧಿಸುವ ಮೂಲಕ ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍ನಿಂದ ಹಾನಿಯಾಗದಂತೆ ತಡೆಯುವುದು. ಭಾರತೀಯರು ಹೆಚ್ಚಾಗಿ ಊಟವಾದ ಬಳಿಕ ವೀಳ್ಯದೆಲೆ ಸೇವಿಸುತ್ತಿದ್ದರು. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಮಧುಮೇಹ ಇರುವವರಲ್ಲಿ ಇದು ತೂಕ ಇಳಿಯುವುದನ್ನು ತಡೆಯುವುದು. ಈ ಕಾರಣದಿಂದಾಗಿ ವೀಳ್ಯದೆಲೆಯು ಚಯಾಪಚಯ ಮತ್ತು ಮಧುಮೇಹದ ಮೇಲೆ ಧನಾತ್ಮಕ ಪರಿಣಾಮ ಬೀರುವುದು
ದಂತ ಆರೋಗ್ಯ :
ವೀಳ್ಯದೆಲೆಯನ್ನು ಅಡಕೆ ಹಾಗೂ ತಂಬಾಕು ಜತೆಗೆ ಸೇರಿಸಿಕೊಂಡು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ತುಂಬಾ ಹಾನಿಕರ ಮಾತ್ರವಲ್ಲದೆ ಇದರಿಂದ ಹಲ್ಲುಗಳು ಕೆಂಪಾಗುವುದು. ಇದು ನಿಮ್ಮ ಸೌಂದರ್ಯವನ್ನೇ ಕೆಡಿಸುತ್ತದೆ. ಆದರೆ ಏಶ್ಯಾದ ಕೆಲವೊಂದು ರಾಷ್ಟ್ರಗಳಲ್ಲಿ ಇದನ್ನು ಜಗಿಯುವರು ಮತ್ತು ಅದರಿಂದಾಗಿ ಅವರ ಹಲ್ಲುಗಳ ಬಣ್ಣ ಕೂಡ ಕಪ್ಪಾಗುವುದು. ಆದರೆ ವೀಳ್ಯದೆಲೆಯಲ್ಲಿರುವಂತಹ ಕೆಲವೊಂದು ಅಂಶಗಳು ಹಲ್ಲುಗಳನ್ನು ಬಲಗೊಳಿಸುವುದು. ಆದರೆ ಅಡಕೆ ಮತ್ತು ಸುಣ್ಣದಲ್ಲಿ ಇರುವಂತಹ ಕೆಲವೊಂದು ಅಂಶಗಳು ಆರೋಗ್ಯಕ್ಕೆ ಹಾನಿಕರ ಮತ್ತು ಇದು ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆಯಿದೆ.
ಗಾಯ ಬೇಗನೆ ಒಣಗಿಸುವುದು
ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ನಿಂದಾಗಿ ಗಾಯವು ಒಣಗಲು ತುಂಬಾ ಸಮಯ ಬೇಕಾಗ ಬಹುದು. ಟೈಪ್ 1 ಮಧುಮೇಹ ಇರುವ ಜನರಲ್ಲಿ ಕೂಡ ಗಾಯ ಬೇಗನೆ ಒಣಗುವುದಿಲ್ಲ. ಇಂತಹ ಸಮಯದಲ್ಲಿ ವೀಳ್ಯದೆಲೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಗಾಯ ಒಣಗಿದಲು ಹಿಂದಿನಿಂದಲೂ ವೀಳ್ಯದೆಲೆಯನ್ನು ಆಯುರ್ವೇದದಲ್ಲಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ವೀಳ್ಯದೆಲೆಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಆಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು ಮತ್ತು ಇದು ಗಾಯವು ಬೇಗನೆ ಒಣಗಲು ನೆರವಾಗುವುದು. ವೀಳ್ಯದೆಲೆಯ ರಸವನ್ನು ನೀವು ಗಾಯಕ್ಕೆ ಹಾಕಿದರೆ ಆಗ ಅದು ಬೇಗನೆ ಒಣಗುವುದು. ಇದು ಕಾಲಜನ್ ಬಿಡುಗಡೆ ಮಾಡಿ ಗಾಯವು ಬೇಗನೆ ಒಣಗಲು ಮತ್ತು ಪುನರುಜ್ಜೀವನಗೊಳ್ಳಲು ಸಾಧ್ಯವಾಗುವುದು.
ಕೆಮ್ಮು ಮತ್ತು ಕಫಗಟ್ಟುವಿಕೆ ನಿವಾರಿಸುವುದು
ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಪ್ರಕಾರ ವೀಳ್ಯದೆಲೆಯು ಕೆಮ್ಮು ನಿವಾರಣೆ ಮಾಡುವುದು. ಈ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನಸಬೇಕು. ಇದರ ಬಳಿಕ ಬಿಸಿ ಮಾಡಿ ಎದೆ ಮೇಲಿಟ್ಟರೆ ಆಗ ಕಫಗಟ್ಟುವುದು ನಿಲ್ಲುವುದು. ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು. ಬ್ರಾಂಕಟೈಸ್ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ.
ವೀಳ್ಯದೆಲೆಯ ಅಡ್ಡಪರಿಣಾಮಗಳು
ವೀಳ್ಯದೆಲೆಯನ್ನು ಅಡಕೆ ಮತ್ತು ಸುಣ್ಣದ ಜತೆಗೆ ಜಗಿಯುತ್ತಿದ್ದರೆ ಆಗ ಈ ವೇಳೆ ವೀಳ್ಯದೆಲೆಯು ಬಿಡುಗಡೆ ಮಾಡುವಂತಹ ಕೆಲವೊಂದು ರಾಸಾಯನಿಕಗಳು ಇವೆರಡ ಜತೆಗೆ ಸೇರಿಕೊಲ್ಳುವುದು. ಈ ರಾಸಾಯನಿಕವು ಕೆಲವೊಂದು ಹಾನಿ ಉಂಟು ಮಾಡಬಹುದು.
- ಕೇಂದ್ರೀಯ ನರಮಂಡಲಕ್ಕೆ ಹಾನಿ ಉಂಟಾಗಬಹುದು.
- ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು.
- ಇದು ಬಾಯಿಯಲ್ಲಿ ಒಳ್ಳೆಯ ಸೂಕ್ಷ್ಮಜೀವಿಗೆ ಪರಿಣಾಮ ಬೀರಬಹುದು.
- ಗರ್ಭಧಾರಣೆ, ಮಕ್ಕಳ ಜನನ ಮತ್ತು ಭ್ರೂಣದ ಬೆಳವಣಿಗೆಗೆ ನಕಾರಾತ್ಮಕ ಪರಿಣಾಮ ಬೀರಬಹುದು.
- ಇದು ಚಟವಾಗಬಹುದು ಮತ್ತು ಹೊರಬರಲು ಕಷ್ಟವಾಗಬಹುದು.
- ತಂಬಾಕು, ಅಡಕೆ ಮತ್ತು ಸುಣ್ಣ ಸೇರಿಸಿಕೊಂಡು ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕರ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ.

