ವಿರಾಜಪೇಟೆ ತಾಲ್ಲೂಕು ಬಿಜೆಪಿಯಿಂದ ಹಿರಿಯ ನಾಗರಿಕರಿಗೆ ದಿನಸಿ ಕಿಟ್ ವಿತರಣೆ

30/07/2020

ಮಡಿಕೇರಿ ಜು. 30 : ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿದ್ದ ಟಿ.ಶೆಟ್ಟಿಗೇರಿ ಹಾಗೂ ನೆಮ್ಮಲೆ ಗ್ರಾಮದ ಹಿರಿಯ ನಾಗರಿಕರಿಗೆ
ವಿರಾಜಪೇಟೆ ತಾಲ್ಲೂಕು ಭಾರತೀಯ ಜನತ ಪಕ್ಷದ ವತಿಯಿಂದ ಅಗತ್ಯ ದಿನಸಿ ಕಿಟ್ ವಿತರಿಸಲಾಯಿತು.
ಗ್ರಾಮದ ಹಿರಿಯರಾದ ಉಳುವಂಗಡ ಜಾಜಿ ಮತ್ತು ಮಾಣೀರ ಸೀತಮ್ಮ ಅವರಿಗೆ ವಿರಾಜಪೇಟೆ ತಾಲ್ಲೂಕು ಬಿಜೆಪಿ ಸದಸ್ಯ ಮಾಣೀರ ಉಮೇಶ್ ಮತ್ತು ಸಾಮಾಜಿಕ ಜಾಲತಾಣದ ಮುಖಂಡ ಚೆಟ್ಟಂಗಡ ಮಹೇಶ್ ಮಂದಣ್ಣ ಕಿಟ್ ವಿತರಿಸಿದರು.