ಸಿ.ಪಿ.ಯೋಗೇಶ್ವರ್ ಅವರೇನು ಮೆಂಟಲ್ ಆಗಿದ್ದಾರಾ : ಡಿ.ಕೆ.ಶಿವಕುಮಾರ್ ತಿರುಗೇಟು

30/07/2020

ಬೆಂಗಳೂರು: ಕಳೆದ 15 ದಿನಗಳ ಹಿಂದೆ ಸಿ ಪಿ ಯೋಗೇಶ್ವರ್ ನನ್ನ ಬಳಿ ಬಂದು ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದಿದ್ದರು. ಆದರೆ ಈಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರೇನು ಮೆಂಟಲ್ ಆಗಿದ್ದಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ಡಿ. ಕೆ. ಶಿವಕುಮಾರ್ ಹಗಲು ಹೊತ್ತಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರು ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲು ಎಂದು ಬಯಸುತ್ತಾರೆ ಎಂದು ಹೇಳಿದ್ದ ಯೋಗೇಶ್ವರ್ ಮಾತಿಗೆ ತಿರುಗೇಟು ನೀಡಿದರು.

15 ದಿನಗಳ ಹಿಂದೆ ಸಿ.ಪಿ.ಯೋಗಿಶ್ವರ್ ನನ್ನ ಬಳಿ ಬಂದಿದ್ದ. ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತೇನೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂ ಕೆಳಗೆ ಇಳಿಸುತ್ತಾರೆ. ಹೀಗಾಗಿ ಕಾಂಗ್ರೆಸ್ ಗೆ ಬರುತ್ತೇನೆ ಅಂತ ನನ್ನ ಬಳಿ ಚರ್ಚೆ ಮಾಡಿದ.

ಆದರೆ ನಾನೇ ಕಾಂಗ್ರೆಸ್ ಗೆ ಬರುವುದು ಬೇಡ. ಅಲ್ಲಿಯೇ ಇರು ಬಿಜೆಪಿ ನಿಷ್ಠನಾಗಿರು ಎಂದು ನಾನೇ ಕಳುಹಿಸಿಕೊಟ್ಟೆ. ಅಂತಹಾ ಯೋಗೇಶ್ವರ್ ಯಾಕೆ ಹೀಗೆ ಮಾತಾಡಿದ್ದಾರೋ ಗೊತ್ತಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.