ವಿಜ್ಞಾನ ವಿಭಾಗದಲ್ಲಿ ಎಂ.ಪೂಜಿತ ಸಾಧನೆ

30/07/2020

ಮಡಿಕೇರಿ ಜು. 30 : ಕಳೆದ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಎಂ.ಪೂಜಿತ ಶೇ.94.8 ಅಂಕಗಳನ್ನು ಗಳಿಸುವ ಮೂಲಕ ಅತ್ಯುನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು ಮಾಹಿತಿ ನೀಡಿದ್ದಾರೆ.
ಕನ್ನಡ – 98 ಇಂಗ್ಲೀμï-, 92, ಭೌತಶಾಸ್ರ್ತ – 91 , ರಸಾಯನಶಾಸ್ರ್ತ- ,92 ಗಣಿತ – 100 ಹಾಗೂ ಜೀವಶಾಸ್ರ್ತ – 96 ಅಂಕಗಳು ಸೇರಿದಂತೆ ಒಟ್ಟು 569 ಅಂಕಗಳನ್ನು ಗಳಿಸುವ ಮೂಲಕ ಪೂಜಿತ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಪೂಜಿತಾ ಇದೇ ಕಾಲೇಜಿನ ಗಣಿತ ಉಪನ್ಯಾಸಕ ಎಚ್.ಎನ್.ಮೋಹನ್ ಕುಮಾರ್ ಹೆಬ್ಬಾಲೆ ಹಾಗೂ ಕನ್ನಡ ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತ್ರಿವೇಣಿ ದಂಪತಿಯ ಪುತ್ರಿಯಾಗಿದ್ದಾಳೆ.
ಕಾಲೇಜಿನಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಪಾಠಪ್ರವಚನಗಳನ್ನು ಅದೇ ದಿನ ಅಭ್ಯಾಸ ಮಾಡುವ ಮೂಲಕ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ನಿರಂತರವಾಗಿ 5-6 ಗಂಟೆ ಸಥ ಅಭ್ಯಾಸ ಮಾಡುತ್ತಿದ್ದೆ ಹಾಗೂ ರಜಾ ದಿನಗಳಲ್ಲಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಅಭ್ಯಾಸ ಮಾಡುವ ಮೂಲಕ ತನ್ನ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದ ಹೆಚ್ಚಿನ ಪೆÇ್ರೀತ್ಸಾಹ ನೀಡಿದ್ದಾರೆ ಎಂದು ಪೂಜಿತಾ ತಿಳಿಸಿದ್ದಾರೆ.