ಸೋಮವಾರಪೇಟೆ ರೋಟರಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ

30/07/2020

ಸೋಮವಾರಪೇಟೆ ಜು.30 : ರೋಟರಿ ಸಂಸ್ಥೆ ವತಿಯಿಂದ ಸಮೀಪದ ಚೌಡ್ಲು ಆಂಗ್ಲ ಮಾದ್ಯಮ ಶಾಲೆಯಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಗಿಡ ನೆಡುವ ಮೂಲಕ ಈಚೆಗೆ ಆಚರಿಸಲಾಯಿತು.
ಸಕಲೇಶಪುರದ ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಡಿ. ಲಿಖೀತ್, ಕಾರ್ಯದರ್ಶಿ ಜೀವನ್‍ಕುಮಾರ್, ಸಹಾಯಕ ರಾಜ್ಯಪಾಲ ಪಿ.ಕೆ. ರವಿ ಸೇರಿದಂತೆ ಪದಾಧಿಕಾರಿಗಳಾದ ಬಿ.ಎಸ್. ಸದಾನಂದ್, ಬಿ.ಎಸ್. ಸುಂದರ್, ಎಚ್.ಸಿ. ನಾಗೇಶ್, ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.