ಅಬ್ಬೂರುಕಟ್ಟೆ ಅರಣ್ಯದಿಂದ ಶ್ರೀಗಂಧ ಕಳ್ಳತನ : ಓರ್ವನ ಬಂಧನ

30/07/2020

ಸೋಮವಾರಪೇಟೆ ಜು.30 : ಶ್ರೀಗಂಧದ ಕೊರಡುಗಳನ್ನು ಬೈಕ್‍ನಲ್ಲಿ ಸಾಗಿಸಲು ಯತ್ನಿಸಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಸಮೀಪದ ಅಬ್ಬೂರುಕಟ್ಟೆ ಬಳಿಯ ದೊಡ್ಡಬ್ಬೂರು ಗ್ರಾಮದ ಎಚ್.ಆರ್.ಪ್ರಕಾಶ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಮಂಜು ಬೈಕ್ ಸಮೇತ ಪರಾರಿಯಾಗಿದ್ದಾನೆ. ಅಬ್ಬೂರುಕಟ್ಟೆ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು, ಕೆತ್ತಿ ತೆಗೆದ 5.5 ಕೆ.ಜಿ. ತೂಕದ 75 ಸಾವಿರ ರೂ.ಗಳ ಮೌಲ್ಯದ ಕೊರಡುಗಳನ್ನು ಕೊಣನೂರಿಗೆ ಸಾಗಿಸುವ ಸಂದರ್ಭ ಬಾಣಾವಾರ ಮುಖ್ಯ ರಸ್ತೆಯಲ್ಲಿ ಬುಧವಾರ ಬಂಧಿಸಲಾಗಿದೆ.
ಕಾರ್ಯಚರಣೆಯಲ್ಲಿ ಬಾಣಾವಾರ ಉಪವಲಯದ ಡಿ.ಆರ್.ಎಫ್.ಒ ಪುನಿತ್, ಗಾರ್ಡ್ ವರುಣ್‍ರಾಜ್, ವೀಕ್ಷಕ ಕರುಂಬಯ್ಯ, ಅಂತೋಣಿ ಇದ್ದರು.