ಅವಿವಾಹಿತ ಯುವಕ ನೇಣಿಗೆ ಶರಣು : ಬಜೆಗುಂಡಿ ಗ್ರಾಮದಲ್ಲಿ ಘಟನೆ

30/07/2020

ಸೋಮವಾರಪೇಟೆ ಜು.30 : ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.
ಬಜೆಗುಂಡಿ ನಿವಾಸಿ ರದೀಶ್(26) ಮೃತ. ಕೇರಳದಲ್ಲಿ ನೌಕರಿ ಮಾಡುತ್ತಿದ್ದವನು ಕಳೆದ 6 ತಿಂಗಳ ಹಿಂದೆ ಮನೆಗೆ ಹಿಂದಿರುಗಿ ಗಾರೆ ಕೆಲಸ ಮಾಡಿಕೊಂಡಿದ್ದ. ಕಾಫಿ ತೋಟವೊಂದರಲ್ಲಿ ಕೇಬಲ್ ನಿಂದ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಪೊಷಕರು ರಾತ್ರಿ ಹುಡುಕಿದರೂ ಮೃತದೇಹ ಕಂಡು ಬಂದಿರಲಿಲ್ಲ. ಗುರುವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಹುಡುಕಿದ ಸಂದರ್ಭ ಪತ್ತೆಯಾಗಿದೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.