ಕೊಡಗಿನಲ್ಲಿ ಕೊರೋನಾಕ್ಕೆ 2 ಬಲಿ : ಒಂದೇ ದಿನ 25 ಸೋಂಕಿತರು ಪತ್ತೆ

ಮಡಿಕೇರಿ ಜು.30 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೆ ಎರಡು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ.
ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಗ್ರಾಮದ ನಿವಾಸಿ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟದಲ್ಲಿ ಆರೋಗ್ಯ ಕಾರ್ಯಕರ್ತರಾಗಿ (ಗ್ರೂಪ್ ಡಿ ನೌಕರರು) ಕಾರ್ಯ ನಿರ್ವಹಿಸುತ್ತಿದ್ದ 45 ವರ್ಷದ ಪುರುಷ ಮೃತ ವ್ಯಕ್ತಿ. ಮಧುಮೇಹ ಸೇರಿದಂತೆ ಇತರ ಕಾಯಿಲೆಯಿಂದ ಬಳಲುತ್ತಿದ್ದ ಇವರು
ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.29 ರಂದು ಆರೋಗ್ಯದಲ್ಲಿ ತೀವ್ರ ಏರು ಪೇರಾದ ಕಾರಣ ಐ.ಸಿ.ಯು ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿ 8.50 ಗಂಟೆಗೆ ಮೃತಪಟ್ಟಿದ್ದು, ಕೋವಿಡ್ ಇರುವುದು ದೃಢ ಪಟ್ಟಿದೆ. ಮತ್ತೊಂದು ಪ್ರಕರಣದಲ್ಲಿ ಬುಧವಾರ ರಾತ್ರಿ ಮಡಿಕೇರಿಯ ಆಜಾದ್ ನಗರದ 54 ವರ್ಷದ ಮಹಿಳೆಯೊಬ್ಬರು ಕೋವಿಡ್ ನಿಂದ ಮೃತ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
::: 25 ಸೋಂಕಿತರು ಪತ್ತೆ :::
ಜಿಲ್ಲೆಯಲ್ಲಿ ಇಂದು ಒಟ್ಟು 25 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಹುಲುಸೆಯ 45 ವರ್ಷದ ಮಹಿಳೆ, 52 ವರ್ಷದ ಪುರುಷ, 33 ವರ್ಷದ ಪುರುಷ, 23 ವರ್ಷದ ಮಹಿಳೆ, 2 ವರ್ಷದ ಬಾಲಕಿ, 27 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಮಡಿಕೇರಿಯ ನಾಪೆÇೀಕ್ಲುವಿನ ಎಮ್ಮೆಮಾಡುವಿನಲ್ಲಿ 52 ವರ್ಷದ ಪುರುಷ. ವಿರಾಜಪೇಟೆಯ ಸಿದ್ಧಾಪುರದ 64 ವರ್ಷದ ಮಹಿಳೆ.
ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ 33 ವರ್ಷದ ಪುರುಷ ಮತ್ತು ಮಡಿಕೇರಿ ಮಹದೇವಪೇಟೆಯ ಎ.ಬಿ ಸ್ಕೂಲ್ ಬಳಿಯ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಮೊಗರಗಳ್ಳಿಯ 37 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕ. ವೀರಾಜಪೇಟೆಯ ಕಾಕೋಟು ಪರಂಬುವಿನ 14 ವರ್ಷದ ಬಾಲಕಿ. ಮಡಿಕೇರಿಯ ಮೇಕೇರಿ ಬಳಿಯ ಸುಭಾಷ್ ನಗರದ 31 ವರ್ಷದ ಪುರುಷ. ಪಾಲಿಬೆಟ್ಟ ಆರೋಗ್ಯ ವಸತಿಗೃಹದ 45 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ. ಸುಂಟಿಕೊಪ್ಪದ ಕನ್ ಬೈಲ್ ಗ್ರಾಮ ಅಂಚೆಯ ಮಂಜಿಕೆರೆಯ 50 ವರ್ಷದ ಪುರುಷ. ಸೋಮವಾರಪೇಟೆ ತಾಲೂಕಿನ ಕುಶಾಲನಗರ ಬಳಿಯ ಬಸವನಹಳ್ಳಿಯ 51 ವರ್ಷದ ಪುರುಷ. ಮಡಿಕೇರಿಯ ಚೆಂಗಪ್ಪ ಪಾಳಂಗಲ ಕರದ್ ಪೋಸ್ಟ್ ನ 60 ವರ್ಷದ ಮಹಿಳೆ ಮತ್ತು 34 ವರ್ಷದ ಪುರುಷ. ಮಡಿಕೇರಿಯ ಚೆಯ್ಯಂಡಾಣೆ ಅಂಚೆಯ ಮರಂದೋಡು ಗ್ರಾಮದ 9 ನೇ ಮೈಲಿನ 40 ವರ್ಷದ ಮಹಿಳೆ. ಮಡಿಕೇರಿ ಚೆಯ್ಯಂಡಾಣೆ ಅಂಚೆಯ ಮರಂದೋಡು ಗ್ರಾಮದ 56 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಕಿಟ್ ಮುಖಾಂತರ 3 ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿ ಎಫ್ ಎಂ ಸಿ ಬಳಿಯ 32 ವರ್ಷದ ಮಹಿಳೆ. ಮಡಿಕೇರಿಯ ಗದ್ದಿಗೆ ಸಮೀಪದ ತ್ಯಾಗರಾಜ ಕಾಲೋನಿಯ 68 ವರ್ಷದ ಮಹಿಳೆ. ಮಡಿಕೇರಿ ಮಹದೇವ ಪೇಟೆಯ 25 ವರ್ಷದ ಮಹಿಳೆಗೆ ಕೋವಿಡ್-19 ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 399 ಆಗಿದ್ದು, 289 ಮಂದಿ ಗುಣಮುಖ ಹೊಂದಿದ್ದಾರೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 101 ಆಗಿದೆ. 9 ಮಂದಿ ಮೃತಪಟ್ಟಿದ್ದು, 99 ಕಂಟೈನ್ ಮೆಂಟ್ ವಲಯಗಳಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.