ಜಿಲ್ಲೆಯಲ್ಲಿ 9 ಮಂದಿಗೆ ಸೋಂಕು ಪತ್ತೆ

July 31, 2020

ಮಡಿಕೇರಿ ಜು.31 : ಕೋವಿಡ್-19 ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೊಸದಾಗಿ 9 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ 36, 30 ಹಾಗೂ 65 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದ್ದು, ಮಡಿಕೇರಿಯ ಗೌಳಿಬೀದಿಯ 56 ವರ್ಷದ ಪುರುಷ ಹಾಗೂ ಪೊಲೀಸ್ ಇಲಾಖೆಯ 56 ವರ್ಷದ ನೌಕರ, ಐಟಿಐ ಜಂಕ್ಷನ್‍ನ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರದ ಹೆಬ್ಬಾಲೆ ಗ್ರಾಮದ 75 ವರ್ಷದ ಪುರುಷ, ವಿರಾಜಪೇಟೆ ತಾಲ್ಲೂಕಿನ ಕರಡದ 26 ವರ್ಷದ ಯುವP, ಕಾಕೋಟುಪರಂಬಿನ 10 ವರ್ಷದ ಬಾಲಕನಿಗೆ ಸೋಂಕು ಪತ್ತೆಯಾಗಿದೆ.
ಒಟ್ಟಾರೆ ಇದುವರೆಗೆ 408 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ 289 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 110 ಸಕ್ರಿಯ ಪ್ರಕರಣಗಳು ಇವೆ. 9 ಮಂದಿ ಮೃತಪಟ್ಟಿದ್ದಾರೆ. ನಿಯಂತ್ರಿತ ಪ್ರದೇಶ 94ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!