ಒಂದೇ ದಿನ ಕೋವಿಡ್ ಗೆ 83 ಬಲಿ

July 31, 2020

ಬೆಂಗಳೂರು ಜು.31 : ರಾಜ್ಯದಲ್ಲಿ ಕೊರೋನಾಅಟ್ಟಹಾಸ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬರೋಬ್ಬರಿ 83 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೋನಾ ಸಾವಿನ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 6128 ಹೊಸ ಪ್ರಕರಣಗಳು ವರದಿಯಾಗಿದ್ದು, 83 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,18,632ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 2,233 ಸೋಂಕಿತರು ಪತ್ತೆಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53,324ಕ್ಕೆ ತಲುಪಿದ್ದು, 36,523 ಸಕ್ರಿಯ ಪ್ರಕರಣಗಳಿವೆ.

error: Content is protected !!