ಬಕ್ರೀದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ ಕೊಡಗಿನ ಮುಸಲ್ಮಾನರು

July 31, 2020

ಮಡಿಕೇರಿ ಜು.31 : ಕೊರೋನಾ ಭೀತಿ ಹಿನ್ನೆಲೆ ಮುಸಲ್ಮಾನ ಬಾಂಧವರು ಬಕ್ರೀದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದರು. ಬೆಳಗ್ಗಿನಿಂದಲೇ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಮಡಿಕೇರಿಯ ಮಸೀದಿಗಳಲ್ಲಿ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು. ದುಬಾರಿ ವೆಚ್ಚದಲ್ಲಿ ಹಬ್ಬವನ್ನು ಆಚರಿಸದೆ ದಾನ ಧರ್ಮ ಮಾಡುವ ಮೂಲಕ ಬಡವರಿಗೆ ನೆರವಾದ ಮುಸ್ಲಿಮರು ಆರೋಗ್ಯ ಜಾಗೃತಿಯನ್ನು ಕೂಡ ಮೂಡಿಸಿದರು.

error: Content is protected !!