ನಿಟ್ಟೂರು ಗ್ರಾ. ಪಂ. ಯಿಂದ ವಿಶ್ವ ಪರಿಸರ ದಿನಾಚರಣೆ

31/07/2020

ಮಡಿಕೇರಿ ಜು. 31 : ನಿಟ್ಟೂರು ಕಾರ್ಮಾಡು ಇಗ್ಗುತ್ತಪ್ಪ ಸಂಘದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷ ಕಾಟಿಮಾಡ ಶಿವಪ್ಪ ಮತ್ತು ನಿಟ್ಟೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಆಶ್ರಮ ಶಾಲಾ ಆವರಣ, ರಸ್ತೆ ಬದಿಯಲ್ಲಿ ಹಾಗೂ ವಿಜಯ ಗ್ರಾಮೀಣ ಯುವಕ ಸಂಘದ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಮಹತ್ವ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಮುಕ್ಕಾಟ್ಟಿರ ಸೋಮಯ್ಯ, ಖಜಾಂಚಿ ತಿರುನೆಲಿಮಾಡ ಪೂಣಚ್ಚ, ಮುಕ್ಕಾಟಿರ ಪ್ರಿನ್ಸ್, ಹೊಟ್ಟೇಂಗಡ ಅಜಿತ್, ಪೊನ್ನಿಮಾಡ ಸಂತೋಷ್, ಪೊನ್ನಿಮಾಡ ಪೂಣಚ್ಚ, ನವೀನ್, ಪ್ರಭು ಕುಮಾರ್ ಇದ್ದರು.