ಪನ್ನೀರ್ ಗ್ರೇವಿ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಪನ್ನೀರ್ 250 ಗ್ರಾಂ, ಈರುಳ್ಳಿ 2, 1 ಇಂಚಿನಷ್ಟು ದೊಡ್ದದಿರುವ ಶುಂಠಿ, 4-5 ಬೆಳ್ಳುಳ್ಳಿ ಎಸಳು, ಬಾದಾಮಿ 10-12, , ಅರಿಶಿಣ ಪುಡಿ 1 ಚಮಚ, ಕೆಂಪು ಮೆಣಸಿನ ಪುಡಿ 1 ಚಮಚ, ಕೊತ್ತಂಬರಿ ಪುಡಿ 1ಚಮಚ, ಒಣ ಮೆಣಸು 2 , ಟೊಮೆಟೊ ಪೇಸ್ಟ್, ಹಾಲು 1 ಚಮಚ, ಗರಂ ಮಸಾಲ 1 ಚಮಚ, ಚಕ್ಕೆ 1, ಸಕ್ಕರೆ ಅರ್ಧ ಚಮಚ, ಪಲಾವ್ ಎಲೆ 1, ರುಚಿಗೆ ತಕ್ಕ ಉಪ್ಪು ಎಣ್ಣೆ
ತಯಾರಿಸುವ ವಿಧಾನ: ಬಾದಾಮಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು 2 ಒಣ ಮೆಣಸು ಹಾಕಿ ನುಣ್ಣನೆ ರುಬ್ಬಬೇಕು. ಹೀಗೆ ರುಬ್ಬುವಾಗ ಸ್ವಲ್ಪ ನೀರು ಹಾಕಿದರೆ ಸಾಕು. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿಮಾಡಬೇಕು. ನಂತರ ಅದರಲ್ಲಿ ಪನ್ನೀರ್ ತುಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಈಗ ಒಂದು ಬಟ್ಟಲಿನಲ್ಲಿ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿ. ಈಗ ಸಾರಿನ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಮಾಢಬೇಕು. ಅದರಲ್ಲಿ ಪಲಾವ್ ಎಲೆ, ಚಕ್ಕೆ ಹಾಕಿ ಅದರಲ್ಲಿ ನುಣ್ಣನೆ ರುಬ್ಬಿದ ಮಿಶ್ರಣ ಹಾಗೂ ಟೊಮೆಟೊ ಪೇಸ್ಟ್, ಸಕ್ಕರೆ, ಹಾಲು ಹಾಕಿ 3-4 ನಿಮಿಷ ಸೌಟ್ ನಿಂದ ಆಡಿಸುತ್ತಾ ಹುರಿಯಬೇಕು, ನಂತರ ಸ್ವಲ್ಪ ನೀರು ಸೇರಿಸಿ ರುಚಿಗೆ ತಕ್ಕ ಉಪ್ಪು ಹಾಕಿ ಅದರಲ್ಲಿ ಫ್ರೈ ಮಾಡಿದ ಪನ್ನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿದರೆ ಬಾದಾಮಿ ಪನ್ನೀರ್ ಗ್ರೇವಿ ರೆಡಿ.
