ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 434ಕ್ಕೆ ಏರಿಕೆ

31/07/2020

ಮಡಿಕೇರಿ ಜು.31 : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 9 ಮತ್ತು ಮಧ್ಯಾಹ್ನ 26 ಒಟ್ಟು 35 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವೀರಾಜಪೇಟೆಯ ವಡ್ಡರ ಮಡುವಿನ 36, 30 ಮತ್ತು 75 ವರ್ಷದ ಮಹಿಳೆ, ಮಡಿಕೇರಿಯ ಗೌಳಿಬೀದಿಯಲ್ಲಿನ 56 ವರ್ಷದ ಪೊಲೀಸ್ ಇಲಾಖೆಯ ಪುರುಷ, ಮಡಿಕೇರಿ ಪೊಲೀಸ್ ಕ್ವಾರ್ಟರ್ಸ್ ನ 56 ವರ್ಷದ ಪುರುಷ, ಕುಶಾಲನಗರದ ಹೆಬ್ಬಾಲೆ ಹುಲುಸೆಯ 75 ವರ್ಷದ ಮಹಿಳೆ.
ವಿರಾಜಪೇಟೆಯ ಕರಡದ 26 ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಟೆಸ್ಟ್ ಮುಖಾಂತರ ಪರೀಕ್ಷಿಸಲಾಗಿ ಮಡಿಕೇರಿ ಐಟಿಐ ಜಂಕ್ಷನ್ ಬಳಿಯ 32 ವರ್ಷದ ಮಹಿಳೆ, ವಿರಾಜಪೇಟೆಯ ಕಾಕೋಟುಪರಂಬುವಿನ 10 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ನಾಪೆÇೀಕ್ಲುವಿನ 25 ವರ್ಷದ ಗರ್ಭಿಣಿ ಮಹಿಳೆ. ಮಡಿಕೇರಿ ಮಹದೇವಪೇಟೆಯ 59 ಮತ್ತು 28 ವರ್ಷದ ಪುರುಷ, ಅಂತರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿರುವ ಮಡಿಕೇರಿ ಬೋಯಿಕೇರಿಯ 32 ಮತ್ತು 29 ವರ್ಷದ ಮಹಿಳೆ, ಗೌಡಳ್ಳಿಯ ಆರೋಗ್ಯ ವಸತಿ ಗೃಹದ 28 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ, ವೀರಾಜಪೇಟೆಯ ವಡ್ಡರಮಡುವಿನ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಗೋಣಿಕೊಪ್ಪದ 28 ಮತ್ತು 29 ವರ್ಷದ ಪುರುಷರು, ಗೋಣಿಕೊಪ್ಪದ ಕೊಯಿಕೇರಿ ಈರಣ್ಣ ಕಾಲೋನಿಯ 46 ವರ್ಷದ ಪುರುಷ, ವಿರಾಜಪೇಟೆ ಪಾಲಿಬೆಟ್ಟದ 83 ವರ್ಷದ ಮಹಿಳೆ, 32 ವರ್ಷದ ವಿರಾಜಪೇಟೆ ವಿಜಯನಗರದ ಆರೋಗ್ಯ ಕಾರ್ಯಕರ್ತೆಯಾದ ಗೋಣಿಕೊಪ್ಪದ ನೇತಾಜಿ ಲೇಔಟ್ ನ 47 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೂ ಸೋಂಕು ತಗುಲಿದೆ.
ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಬಳಿಯ 8 ವರ್ಷದ ಬಾಲಕಿ ಮತ್ತು 4 ವರ್ಷದ ಬಾಲಕ, ಮಡಿಕೇರಿ ಗಣಪತಿ ಬೀದಿಯಲ್ಲಿನ 26 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 73 ವರ್ಷದ ಪುರುಷ, ಸೋಮವಾರಪೇಟೆಯ ಸುಂಟಿಕೊಪ್ಪದ ಗುಂಡುಕಟ್ಟಿಯ 35 ವರ್ಷದ ಪುರುಷನಿಗೂ ಸೋಂಕು ತಗುಲಿದೆ.
ಮಡಿಕೇರಿ ಪೊಲೀಸ್ ವಸತಿ ಗೃಹದ 48 ವರ್ಷದ ಪೊಲೀಸ್ ಇಲಾಖೆಯ ಪುರುಷ ಸಿಬ್ಬಂದಿ, ಮಡಿಕೇರಿಯ ಪೊಲೀಸ್ ವಸತಿ ಗೃಹದ 46 ವರ್ಷದ ಪೊಲೀಸ್ ಇಲಾಖೆಯ ಪುರುಷ ಸಿಬ್ಬಂದಿ, ಸೋಮವಾರಪೇಟೆಯ ಶಾಂತಳ್ಳಿ ಗುಡ್ಡಳ್ಳಿಯ 48 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ಮಡಿಕೇರಿಯ ಸುಬ್ರಮಣ್ಯ ನಗರದ ಪೊಲೀಸ್ ವಸತಿ ಗೃಹದ 41 ವರ್ಷದ ಪೊಲೀಸ್ ಇಲಾಖೆಯ ಪುರುಷ ಸಿಬ್ಬಂದಿಗೆ ಸೋಂಕು ತಗುಲಿದೆ.
ಮಡಿಕೇರಿ ಕಾರಗುಂದದ ಕಡಿಯತ್ತೂರಿನ 29 ವರ್ಷದ ಮಹಿಳೆ, ಸೋಮವಾರಪೇಟೆ ಹೊಸೂರಿನ ತೆಪ್ಪದಕಂಡಿ ಗುಡ್ಡೆಯ 79 ವರ್ಷದ ಮಹಿಳೆ, ಸೋಮವಾರಪೇಟೆ ಕುಶಾಲನಗರದ 42 ವರ್ಷದ ಪುರುಷ.ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿಯ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ 19 ಹೊಸ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಕಲ್ಪವೃಕ್ಷ ಕಟ್ಟಡ ಹತ್ತಿರ ಗೌಳಿಬೀದಿ ಮಡಿಕೇರಿ, ಪೊಲೀಸ್ ವಸತಿ ಗೃಹ, ಮೈತ್ರಿ ಹಾಲ್ ಸಮೀಪ, ಮಡಿಕೇರಿ. ಬಸವೇಶ್ವರ ದೇವಸ್ಥಾನ, ಹುಲುಸೆ, ಹೆಬ್ಬಾಲೆ, ಕುಶಾಲನಗರ. ಪೊಲೀಸ್ ವಸತಿ ಗೃಹ, ಮಡಿಕೇರಿ. ಗುಡ್ಡಳ್ಳಿ, ಶಾಂತಳ್ಳಿ, ಸೋಮವಾರಪೇಟೆ, ಸುಬ್ರಹ್ಮಣ್ಯ ನಗರ, ಪೊಲೀಸ್ ವಸತಿ ಗೃಹ, ಮಡಿಕೇರಿ. ಚೊಣಕೇರಿ, ನಾಪೋಕ್ಲು, ರವಿ ಅಪ್ಪಾಜಿ, ಹಳೇ ಕಟ್ಟಡ ಎದುರು, ಮಾರುಕಟ್ಟೆ, ಮಹದೇವಪೇಟೆ. ಗೌಡಳ್ಳಿ, ಆರೋಗ್ಯ ವಸತಿ ಗೃಹ, ಗುಂಡುಕುಟ್ಟಿ, ಸುಂಟಿಕೊಪ್ಪ, ಸೋಮವಾರಪೇಟೆ, ಕೊಯಿಕೇರಿ, ಈರಣ್ಣ ಕಾಲೋನಿ, ಗೋಣಿಕೊಪ್ಪ. ಕ್ರೈಗ್ ಮೋರ್ ಎಸ್ಟೇಸ್ಟ್ ಪಾಲಿಬೆಟ್ಟ, ವಿರಾಜಪೇಟೆ. ವಿಜಯನಗರ ವಿರಾಜಪೇಟೆ. ನೇತಾಜಿ ಲೇ ಔಟ್, ಗೋಣಿಕೊಪ್ಪ, ಈಡನ್ ಪಾರ್ಕ್ ತೆಪ್ಪದಕಂಡಿ, ಗುಡ್ಡೆಹೊಸೂರು, ಸೋಮವಾರಪೇಟೆ. ಪ್ರೆಸ್ಟೀಜ್ ಹೋಟೆಲ್ ಹಿಂಭಾಗ, ಕುಶಾಲನಗರ. ಬಾಬರಿ ಮಸೀದಿ ಹತ್ತಿರ, ಗಣಪತಿ ಬೀದಿ, ಮಡಿಕೇರಿ. ಭರತ್ ಸ್ಟೋರ್ಸ್, ಮಹದೇವ ಪೇಟೆ, ಮಡಿಕೇರಿ. ಮುತ್ತಪ್ಪ ದೇವಸ್ಥಾನ ಹತ್ತಿರ ಮಡಿಕೇರಿ.
ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 434 ಆಗಿದ್ದು, 289 ಮಂದಿ ಗುಣಮುಖರಾಗಿದ್ದಾರೆ. 136 ಸಕ್ರಿಯ ಪ್ರಕರಣಗಳಿದ್ದು, 09 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 110 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.