ಡಿ ದರ್ಜೆ ನೌಕರರ ನೇಮಕ್ಕೆ ಟೆಂಡರ್ ಆಹ್ವಾನ

July 31, 2020

ಮಡಿಕೇರಿ ಜು.31 : ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಡಿ ದರ್ಜೆ ನೌಕರರನ್ನು ನೇಮಕ ಮಾಡಲು ಒಂದು ವರ್ಷದ ಅವಧಿಗೆ ಅಧಿಕೃತ ಸೇವಾ ಸಂಸ್ಥೆಗಳಿಂದ ದ್ವಿ ಲಕೋಟೆ ಪದ್ಧತಿಯಲ್ಲಿ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ.
ಜುಲೈ, 30 ರಿಂದ ಆಗಸ್ಟ್, 07 ರವರೆಗೆ ಟೆಂಡರ್ ಅರ್ಜಿ ವಿತರಣೆ, ಭರ್ತಿ ಮಾಡಿದ ಟೆಂಡರ್ ನೀಡಲು ಆಗಸ್ಟ್, 10 ಕೊನೆಯ ದಿನವಾಗಿದೆ. ಆಗಸ್ಟ್, 11 ರಂದು ಬೆಳಗ್ಗೆ 11 ಗಂಟೆಗೆ ಟೆಂಡರ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಯನ್ನು ಕಚೇರಿ ಕೆಲಸದ ದಿನಗಳಂದು ಪಡೆಯಬಹುದು ಎಂದು ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.

error: Content is protected !!