ಅನ್‍ಲಾಕ್ 3 : ಆ. 31 ರವರೆಗೆ ಕೊಡಗಿನಲ್ಲಿ ನಿರ್ಬಂಧ ಜಾರಿ

ಮಡಿಕೇರಿ ಜು.31 : ಕೊಡಗು ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ವಲಯಗಳ ಹೊರಭಾಗದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಅನುಮತಿಸಲಾದ ಎಲ್ಲಾ ಪ್ರಕ್ರಿಯೆಗಳನ್ನು ನಿಯಮಾನುಸಾರ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಶಾಲೆ, ಕಾಲೇಜು, ಶೈಕ್ಷಣಿಕ, ತರಬೇತಿ, ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳು ದಿನಾಂಕ 31.08.2020ರ ವರೆಗೆ ಇರುವುದಿಲ್ಲ. ಆದರೆ ಆನ್‍ಲೈನ್ / ದೂರ ಶಿಕ್ಷಣ ನಡೆಸಬಹುದಾಗಿದೆ.
ಸಿನಿಮಾ ಹಾಲ್, ಈಜು ಕೊಳ, ಮನೋರಂಜನಾ ಪಾರ್ಕ್, ಥಿಯೇಟರ್ಗಳು, ಬಾರ್ ಮತ್ತು ಅಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇಂತಹ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
ಯೋಗ ಕೇಂದ್ರಗಳು ಮತ್ತು ಜಿಮ್ನಾಸಿಯಂಗಳನ್ನು ಕೇಂದ್ರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ SOP ಸ್ವೀಕೃತವಾದ ನಂತರ ದಿನಾಂಕ 05.08.2020ರಿಂದ ನಡೆಸಬಹುದಾಗಿದೆ.
ಎಲ್ಲಾ ಸಾಮಾಜಿಕ / ರಾಜಕೀಯ / ಕ್ರೀಡೆ / ಮನೋರಂಜನೆ / ಶೈಕ್ಷಣಿಕ / ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರೆ ಹೆಚ್ಚು ಸಂಖ್ಯೆಯ ಒಗ್ಗೂಡುವಿಕೆ ಮುಂತಾದ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
ಮೇಲ್ಕಂಡಂತೆ ಕ್ರಮ ಸಂಖ್ಯೆ 1ರ ಉಪ ಕ್ರಮ ಸಂಖ್ಯೆಗಳ ಭಾಗಶಃ ಮಾರ್ಪಾಡಿನ ಹೊರತಾಗಿ ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
