ಸುಂಟಿಕೊಪ್ಪದಲ್ಲಿ ಸರಳವಾಗಿ ನಡೆದ ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ಬಕ್ರೀದ್ ಹಬ್ಬ

ಸುಂಟಿಕೊಪ್ಪ,ಜು.31: ಜಿಲ್ಲಾಡಳಿತದ ಮಾರ್ಗಸೂಚಿಯಂತೆ ವರಮಹಾಲಕ್ಷ್ಮೀ ಹಾಗೂ ಬಕ್ರೀದ್ ಹಬ್ಬವನ್ನು ಹಿಂದೂಗಳು ಹಾಗೂ ಮುಸ್ಲಿಮರು ಸಡಗರ ಸಂಭ್ರವಿಲ್ಲದೆ ಸರಳವಾಗಿ ಆಚರಿಸಿಸಿದರು.
ವರಮಹಾಲಕ್ಷ್ಮೀ ಪೂಜೆಯ ಅಂಗವಾಗಿ ವರ್ಷಂಪ್ರತಿ ದೇವಸ್ಥಾನಗಳಿಗೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ವರಮಹಾಲಕ್ಷ್ಮೀಗೆ ಪೂಜೆಯನ್ನು ಸಲ್ಲಿಸುತ್ತಿದ್ದರು. ಆದರೆ, ಈ ಬಾರೀ ಕರೋನಾ ಸೋಂಕು ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಭಯದ ವಾತವಾರಣ ಸೃಷ್ಠಿಯಾಗಿದೆ. ದೇವಸ್ಥಾನಗಳಿಗೆ ಬೆರಳೆಣಿಕೆ ಮಂದಿ ಆಗಮಿಸಿ ಪೂಜೆಯನ್ನು ಸಲ್ಲಿಸಿ ಹಿಂತೆರಳಿದರು.
ಮಹಿಳೆಯರು ಹೂ ಹಣ್ಣು ಹಂಪಲುಗಳಿಗೆ ದುಬಾರಿಯಾದರೂ ಮನೆಗಳಲ್ಲಿ ಹಲವು ವರಮಹಾಲಕ್ಷ್ಮೀಯ ಮೂರ್ತಿಯನ್ನು ಸಿಂಗಾರಿಸಿ ಹೂ ಹಣ್ಣು ಹಂಪಲು ಇರಿಸಿ ಪೂಜೆ ಪುರಸ್ಕಾರದಲ್ಲಿ ತೊಡಗಿಸಿಕೊಂಡರು.
ಮುಸ್ಲಿಂ ಭಾಂದವರು ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿರುವ ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ,ನೂರಲ್ ಜುಮಾ ಮಸ್ಜೀದ್, ಸುನ್ನಿ ಹನಫಿ ಜಮಾತ್, ಕುಬಾ ಮಸ್ಜಿದ್, ಸಲಾಫಿ ಮಸೀದಿಗಳಲ್ಲಿ ಸಾಮೂಹಿಕವಾಗಿ ಹಬ್ಬದ ಅಂಗವಾಗಿ ವಿಶೇಷ ಪ್ರಾರ್ಥನೆಯನ್ನು ಮಸೀದಿಗಳ ಮೌಲವಿಗಳು ನೇರವೇರಿಸಿದ್ದರು. ಜಿಲ್ಲಾಡಳಿತದ ಆದೇಶದಂತೆ ಮನೆಯಿಂದಲೇ ಜಾಯಿ ನಮಾಝ್‍ಗೆ ಬೇಕಾದ ತಂದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ಮುಸ್ಲಿಂ ಭಾಂದವರು ಹಬ್ಬದ ದಿನಗಳಂದು ಒಬ್ಬರನ್ನೋಬ್ಬರು ಅಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ವಾಡಿಕೆ ಆದರೆ ಕರೋನಾ ಹಿನ್ನಲೆ ಎಲ್ಲಾರೂ ಸಾಮಾಜಿಕ ಅಂತರ ಕಾಯ್ದುಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.

