ವಾರ್ತಾ ಇಲಾಖೆಯ ಬಿ.ಕೆ.ಸತೀಶ್‍ಗೆ ಆತ್ಮೀಯ ಬೀಳ್ಕೊಡುಗೆ

31/07/2020

ಮಡಿಕೇರಿ ಜು.31 :-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೊಡಗು ಜಿಲ್ಲಾ ಕಚೇರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಾಗತಕಾರರು ಹಾಗೂ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಸತೀಶ್ ಅವರು ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶಾಲು, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿದರು. ವರ್ಗಾವಣೆಗೊಂಡಿರುವ ಬಿ.ಕೆ ಸತೀಶ್ ಅವರು ತಮ್ಮ 4 ವರ್ಷದ ಕರ್ತವ್ಯದ ಅನುಭವ ಹಂಚಿಕೊಂಡರು. ಕಚೇರಿ ಸಿಬ್ಬಂದಿಗಳಾದ ರಾಜು, ಪಿ.ಎಸ್.ಗಣೇಶ್, ಎಂ.ಎನ್.ಗಣೇಶ್, ದೇವರಾಜಯ್ಯ, ಇತರರು ಇದ್ದರು.