ಪಾಕ್ ಮಹಿಳೆಯಿಂದ ಪ್ರಧಾನಿಗೆ ರಾಖಿ

August 1, 2020

ನವದೆಹಲಿ ಜು.ಆ. 1 : ರಕ್ಷಾ ಬಂಧನದ ಪ್ರಯುಕ್ತ ಪಾಕಿಸ್ತಾನ ಮಹಿಳೆ ಖಮರ್ ಮೊಹ್ಸಿನ್ ಶೈಖ್ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿಯನ್ನು ಕಳುಹಿಸಿದ್ದಾರೆ.
ಶೈಖ್ ಅವರು ಕಳೆದ 25 ವರ್ಷಗಳಿಂದ ಪ್ರತಿ ರಕ್ಷಾ ಬಂಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸುತ್ತಿದ್ದು, ಭಾರತದಿಂದ ಆಹ್ವಾನ ನೀಡಿದರೆ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ವರ್ಷಕ್ಕೊಂದು ಬಾರಿ ನನ್ನ ಹಿರಿಯ ಸಹೋದರನಿಗೆ ರಾಖಿ ಕಟ್ಟುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ಐದು ವರ್ಷಗಳು ಅವರಿಗೆ ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಧನಾತ್ಮಕ ನಿರ್ಧಾರವನ್ನು ವಿಶ್ವವೇ ಗುರುತಿಸುತ್ತಿದೆ ಎಂದು ಕಳೆದ ವರ್ಷ ಅವರು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.

error: Content is protected !!